ಕಾರವಾರ: ನ್ಯೂಸ್ ಕೋಡ್ ಕರ್ನಾಟಕ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ‘ಡಿಜಿಟಲ್ ಮಾಧ್ಯಮ ಮತ್ತು ಯುವಜನತೆ’ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಹಳ್ಳಿಯವರು ಮಾತನಾಡಿ ಮಾಧ್ಯಮಗಳಿಗೆ ನ್ಯಾಯಾಧೀಶರ ವಿವೇಕ, ಸ್ಥಿತಪ್ರಜ್ಞತೆ ಹಾಗೂ ತಾಯಿಯೊಳಗಿನ ತಾಯ್ತನ ಇರಬೇಕು’ ಎಂದು ಅಭಿಪ್ರಾಯಪಟ್ಟರು.

ಡಿಜಿಟಲ್ ಮಾಧ್ಯಮ ಮತ್ತು ಯುವಜನತೆ ಕುರಿತು ಉಪನ್ಯಾಸ ನೀಡಿದ ಟೈಮ್ಸ್‌ ಆಫ್ ಇಂಡಿಯಾದ ವರದಿಗಾರ ದೀಪಕ್‌ಕುಮಾರ್ ಶೆಣೈ, ‘ಮೊಬೈಲ್ ಆ್ಯಪ್ ಬಳಸುವಾಗ ಎಚ್ಚರವಹಿಸಬೇಕು. ಗೂಗಲ್ ಸೇರಿದಂತೆ ನೂರಾರು ಜಾಲತಾಣಗಳಲ್ಲಿ ಜಾಹೀರಾತುಗಳೇ ತುಂಬಿಕೊಂಡಿರುತ್ತವೆ. ಈ ವೇಳೆ ಆಯ್ಕೆ ಮಾಡುವಾಗ ಯೋಗ್ಯ ಸಂಗತಿಗಳನ್ನು ಮಾತ್ರ ಹುಡುಕಿ ಪಡೆಯಬೇಕು’ ಎಂದರು.

RELATED ARTICLES  ಕೈಕೊಂಡ ಕಾರ್ಯ-ಜನರ ಆಶೀರ್ವಾದವೇ ನಮಗೆ ಶ್ರೀರಕ್ಷೆ.-ಶಾರದಾ ಮೋಹನ ಶೆಟ್ಟಿ.

‘ಫೇಸ್‌ಬುಕ್ ಮತ್ತು ವಾಟ್ಸ್‌ಆ್ಟಪ್‌ ಗುಂಪುಗಳಲ್ಲಿ ಎಚ್ಚರದಿಂದ ವ್ಯವಹರಿಸಬೇಕು. ಸಮಾಜದ ಶಾಂತಿ ಕೆಡಿಸುವ ಮತ್ತು ಕೋಮು ಸೌಹಾರ್ದತೆ ಹಾಳು ಗೆಡಹುವ ಸಂಗತಿಗಳನ್ನು ಆತ್ಮೀಯರಿಂದ ಬಂದಿದೆ ಎಂದು ಇತರರೊಂದಿಗೆ ಹಂಚಿಕೊಳ್ಳಬೇಡಿ. ಡಿಜಿಟಲ್ ಮಾಧ್ಯಮವನ್ನು ರಚನಾತ್ಮಕ ಕೆಲಸಗಳಿಗೆ ಬಳಸಿಕೊಳ್ಳಿ’ ಎಂದ ಅವರು, ‘ಮುದ್ರಣ ಮಾಧ್ಯಮಗಳು ಇಂದು ತಮ್ಮದೇ ಆದ ಸುದ್ದಿ ತಾಣಗಳನ್ನು ಹೊಂದಿವೆ. ಹೊರ ದೇಶದಲ್ಲಿನ ಕನ್ನಡಿಗರು ಕನ್ನಡದ ಪತ್ರಿಕೆಗಳನ್ನು ಈ ತಾಣಗಳನ್ನು ಬಳಸಿ ಹಾಗೂ ವಿವಿಧ ಪತ್ರಿಕೆಗಳ ಆ್ಯಪ್ ಬಳಸಿ ಹೊರ ನಾಡ ಕನ್ನಡಿಗರು ಸುದ್ದಿಗಳನ್ನು ಓದಲು ಪ್ರಾರಂಭಿಸಿದ್ದಾರೆ. ಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಸ್ವರೂಪದಲ್ಲಿ ಪತ್ರಿಕೆಗಳನ್ನು ಓದುವ ದಿನಗಳು ಕೂಡ ಬರಬಹುದು’ ಎಂದರು.

RELATED ARTICLES  ಅಂಕೋಲಾದಲ್ಲಿ ಸದ್ದು ಮಾಡಿದ ಡೆಡ್ಲಿ ಕೊರೋನಾ : ಪೋಲೀಸ್ ಕಾನ್ಸ್‌ಟೇಬಲ್ ಗೆ ಸೋಂಕು..!

ಜರ್ನಲಿಸ್ಟ್‌ ಅಸೋಶಿಯೇಶನ್‌ನ ಜಿಲ್ಲಾ ಘಟಕದ ಅಧ್ಯಕ್ಷ ಮಂಜು ಕಡತೋಕ ಮಾತನಾಡಿದರು. ದೀಪಕ್ ಶೆಟ್ಟಿ ವೇದಿಕೆಯಲ್ಲಿದ್ದರು. ಸರ್ಕಾರಿ ಪದವಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ವಿನಾಯಕ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ವಿ.ಎಂ.ನಾಯ್ಕ ಸ್ವಾಗತಿಸಿದರು. ಸುವರ್ಣ ಸಂಗಡಿಗರು ಪ್ರಾರ್ಥಿಸಿದರು. ಜರ್ನಲಿಸ್ಟ್‌ ಯುನಿಯನ್ ಕಾರ್ಯದರ್ಶಿ ಗಿರೀಶ್ ನಾಯ್ಕ ವಂದಿಸಿದರು. ಉಪನ್ಯಾಸಕಿ ಶಿಲ್ಪಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.