ರೆ ದೇವಾನುದೇವತೆಗಳಿಗೆ ಹೋಲಿಸಿದರೆ ಅಯ್ಯಪ್ಪ ಸ್ವಾಮಿ ಯೋಗಮುದ್ರೆಯಲ್ಲಿ ಕೂತು, ಚಿನ್ಮುದ್ರೆ ಧಾರಿಯಾಗಿ ಭಕ್ತರಿಗೆ ಅಭಯಹಸ್ತ ನೀಡುತ್ತಿರುತ್ತಾರೆ. ಅಯ್ಯಪ್ಪಸ್ವಾಮಿ ಅವರ ಮೊಳಕಾಲಿನ ಸುತ್ತ ಒಂದು ಬಂಧನ ಇರುತ್ತದೆ. ಅದನ್ನು ‘ವಸ್ತ್ರ ಬಂಧನ’ ಎಂದು ಕರೆಯುತ್ತಾರೆ. ಈ ಬಂಧನ ಅಯ್ಯಪ್ಪ ಸ್ವಾಮಿಗೆ ಹೇಗೆ ಬಂತು?
ಪಂದಳ ರಾಜನ ಬಳಿ ಹನ್ನೆರಡು ವರ್ಷಗಳ ಕಾಲ ಬೆಳೆದ ಶ್ರೀ ಮಣಿಕಂಠನು ತಾನು ಹರಿಹರಾಸುತನೆಂದು, ಧರ್ಮವನ್ನು ರಕ್ಷಿಸಲು ಆವಿರ್ಭವಿಸಿದ್ದೇನೆ ಎಂಬ ಸತ್ಯವನ್ನು ನಾರದ ಮಹರ್ಷಿಗಳ ಮೂಲಕ ತಿಳಿದುಕೊಳ್ಳುತ್ತಾರೆ. ಮಹಿಷಿಯನ್ನು ವಧಿಸಿದ ಬಳಿಕ ಶಬರಿಮಲೆ ಆಲಯದಲ್ಲಿ ಚಿನ್ಮುದ್ರೆಯಿಂದ ಯೋಗಾಮುದ್ರೆಯಲ್ಲಿ ಜ್ಞಾನಪೀಠದ ಮೇಲೆ ಕುಳಿತು ಭಕ್ತರನ್ನು ಅನುಗ್ರಹಿಸುತ್ತಿತ್ತಾನೆ ಅಯ್ಯಪ್ಪ.
ಶಬರಿಗಿರಿ ಮೇಲೆ ಆಲಯ ಕಟ್ಟಿಸಿ, ಸ್ವಾಮಿ ಆಭರಣಗಳನ್ನು ಹೊರುತ್ತಾ ಹದಿನೆಂಟು ಮೆಟ್ಟಿಲು ಹತ್ತಿ ಪಂದಳರಾಜು ಬರುತ್ತಾನೆ. ತಂದೆಯಾದ ಪಂದಳರಾಜನ ಬರುವಿಕೆಯನ್ನು ಗುರುತಿಸಿ ಸ್ವಾಮಿ ಯೋಗಾಸನದಿಂದ ಎದ್ದು ನಿಲ್ಲಲು ಪ್ರಯತ್ನಿಸುತ್ತಾನೆ. ಅಷ್ಟರೊಳಗೆ ಸ್ವಾಮಿಯನ್ನು ಬೇಡ ಬೇಡ ಎಂದು ತಡೆದು ತನ್ನ ಭುಜದ ಮೇಲಿನ ರೇಶ್ಮೆ ವಸ್ತ್ರದಿಂದ ಅಯ್ಯಪ್ಪಸ್ವಾಮಿ ಮೊಳಕಾಲುಗಳಿಗೆ ಆ ವಸ್ತ್ರವನ್ನು ಸುತ್ತಿ ಬಂಧಿಸುತ್ತಾರೆ.
ತಾನು ಇಲ್ಲಿ ಅಯ್ಯಪ್ಪಸ್ವಾಮಿಯನ್ನು ಯಾವ ರೂಪದಲ್ಲಿ ನೋಡಿ ಪರವಶನಾದೆನೋ ಅದೇ ರೀತಿ ಉಳಿದ ಭಕ್ತರು ಇದೇ ರೂಪದಲ್ಲಿ ಸ್ವಾಮಿಯನ್ನು ನೋಡಿ ಆನಂದಿಸಬೇಕೆಂದು ಅಯ್ಯಪ್ಪನನ್ನು ಕೋರಿದರು. ಅದಕ್ಕೆ ಸ್ವಾಮಿ ಅಂಗೀಕರಿಸಿದ. ಆ ರೀತಿ ಕಟ್ಟಿರುವುದನ್ನು ‘ವಸ್ತ್ರ ಬಂಧ’ ಎನ್ನುತ್ತಾರೆ. ಇದನ್ನು ಶಿವಕೇಶವರು ಐಕ್ಯಗೊಳಿಸಿದ ಬಂಧ ಎಂದೂ ಕರೆಯುತ್ತಾರೆ.