ಶಿರಸಿ :ಕಳೆದ ಮೂರು ದಿನಗಳಿಂದ ಶಿರಸಿಯಲ್ಲಿ ಸಂಗೀತ ಜಾತ್ರೆ ನಡೆಯುತ್ತಿದ್ದು, ಎರಡು ದಿನಗಳ ಕಾಲ ಸುಗಮ ಸಂಗೀತ ಪರಿಷತ್ ರಾಜ್ಯ ಸಮ್ಮೇಳನದ ಜೊತೆಗೆ ಒಂದು ದಿನದ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ ಜನರನ್ನು ಸಂಗೀತದಲ್ಲಿ ಮಿಂದೇಳುವಂತೆ ಮಾಡಿತು.

ಮಧುರ ಮಧುರವೀ ಮಂಜುಳಗಾನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಬಾನಲ್ಲೂ‌ ನೀನೇ ಭುವಿಯಲ್ಲೂ ನೀನೇ, ಎಲ್ಲಿರುವೆ ಮನವ ಕಾಣುವ ರೂಪಸಿಯೇ, ತೆರೆದಿದೆ ಮನೆ ಬಾ ಓ ಅತಿಥಿ ಸೇರಿದಂತೆ ಚಲಚಿತ್ರಗೀತೆಗಳನ್ನು ಹಾಡಿ ಜನರನ್ನು ಮನರಂಜಿಸಿದರು. ಕಳೆದ ಎರಡು ದಿನಗಳಿಗಿಂತ ಚಲನಚಿತ್ರ ಗೀತೆಗಳನ್ನು ಕೇಳಲು ಜನರು ಹೆಚ್ಚು ಆಸಕ್ತಿ ತೋರಿಸಿದರು. ರಾಜ್ಯ ಮಟ್ಟದ ಕಲಾವಿದರೊಂದಿಗೆ ಸ್ಥಳೀಯ ಸಂಗೀತಗಾರರು, ಸಂಗೀತವನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಗೀತೆಗಳನ್ನು ಪ್ರಸ್ತುತ ಪಡಿಸಿದರು. ಇದರೊಂದಿಗೆ ನೃತ್ಯ ಪ್ರದರ್ಶನಗಳೊಂದಿಗೂ ಜನರನ್ನು ವಿವಿಧ ತಂಡದವರು ರಂಜಿಸಿದರು.

RELATED ARTICLES  ವ್ಯಕ್ತಿತ್ವ ವಿಕಸನಕ್ಕೆ ಆಟೋಟ ಸ್ಪರ್ಧೆಗಳು ಅಗತ್ಯ : ದಿನಕರ ಶೆಟ್ಟಿ.

ಈ ಮೊದಲು ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಆಯುಕ್ತ ರಾಜು ಮೊಗವೀರ ಸಂಗೀತ ಎನ್ನುವುದು ಭಾವ, ಭಾಷೆಗಳನ್ನು ಮೀರಿದ ಅನುಭೂತಿಯಾಗಿದೆ . ಕನ್ನಡವನ್ನು ಅಭ್ಯಸಿಸದೇ ಇದ್ದವರು, ಕನ್ನಡ ಕಲಿಯದೇ ಇದ್ದವರು ಕನ್ನಡದ ಸಂಗೀತ ಗೀತೆಗಳನ್ನು ಕೇಳುತ್ತಾರೆ. ಸಂಗೀತದಿಂದ ವಯಕ್ತಿಕ ಹಾಗೂ ಗುಂಪಿನಲ್ಲಿ ಸಂತೋಷ ಸಿಗುತ್ತದೆ ಎಂದರು.

RELATED ARTICLES  ಭಟ್ಕಳದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ: ಮನೆ ಮಾಲೀಕನಿಂದ ಪ್ರತಿಭಟನೆ: ಪೋಲೀಸರ ಮದ್ಯಸ್ಥಿಕೆಯಲ್ಲಿ ನಡೆಯಿತು ತೆರವು ಕಾರ್ಯ

ಈ ಸಂದರ್ಭದಲ್ಲಿ ಪ್ರಮುಖರಾದ ಉಪೇಂದ್ರ ಪೈ, ಮನೋಹರ ಮಲ್ಮನೆ, ಶಾಂತಾ ಶೆಟ್ಟಿ ಮುಂತಾದವರು ಇದ್ದರು. ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ, ಕದಂಬ ಕಲಾ ವೇದಿಕೆ ಹಾಗೂ ದೂರದರ್ಶನ ಕೇಂದ್ರ ಬೆಂಗಳೂರು ಮತ್ತು ಆಕಾಶವಾಣಿ ಧಾರವಾಡ ಇವರುಗಳು ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.