ಕುಮಟಾದ ಸರಣಿ ಕಳ್ಳತನದ ಆರೋಪಿಯ ಬಂಧನ.

ಸರಣಿ ಕಳ್ಳತನ ಭೇದಿಸುವಲ್ಲಿ ಕುಮಟಾ ಪೋಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಮಧ್ಯಪ್ರದೇಶದವನಾಗಿದ್ದು ಆತನಿಂದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಸುಮಾರು  3.5 ಲಕ್ಷ ಬಂಗಾರದ ಆಭರಣ. 1ಕಿ.ಗ್ರಾಂ. 400ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಅಶೋಕ ನಗರದ ಬಲೂನು ವ್ಯಾಪಾರಿ ತಿಥಿಯಾ ಎಂದು ಗುರ್ತಿಸಲಾಗಿದೆಕುಮಟಾ ಪೋಲಿಸ್ ಠಾಣೆಯಲ್ಲಿ ಕಳೆದ 2016 ಸಾಲಿನಿಂದ ಇಲ್ಲಿಯವರೆಗೆ ಪದೇ ಪದೇ ಮನೆ ಕಳ್ಳತನ ಬಂಗಾರದ ಅಂಗಡಿ ಕಳ್ಳತನದಂತ ಪ್ರಕರಣಗಳು ಘಟಿಸುತ್ತಿದ್ದು ಪೋಲಿಸರಿಗೆ ಇದೊಂದು ಸವಾಲಿನ ಪ್ರಶ್ನೆಯಾಗಿದ್ದು ಸಾರ್ವಜನಿಕರು ಸಹ ಈ ಬಗ್ಗೆ ತೀವೃ ಅಸಮಾಧಾನ ವ್ಯಕ್ತಪಡಿಸಿದ್ದು ಪ್ರಕರಣೆ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕುಮಟಾ ಪೋಲಿಸರು ಸವಾಲಾಗಿ ತೆಗೆದುಕೊಂಡು ಮಾನ್ಯ ಎಸ್ ಪಿ ಸಾಹೇಬರು ಕಾರವಾರದವರ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಡಿ ಎಸ್ ಪ ಭಟ್ಕಳ ರವರ ನಿರ್ದೆಶನದಂತೆ ಸಿಪಿಐ ಕುಮಟಾರವರ ಮುಂದಾಳತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಪ್ರಕರಣದ ಕಾರ್ಯದಲ್ಲಿದ್ದಾಗ ಕಳೆದ ಎಪ್ರಿಲ್ ತಿಂಗಳಲ್ಲಿ ಕುಮಟಾ ಬಸ್ ಡೀಪೋ ಎದುರಿನಲ್ಲಿ ಸಿಗಂಧರೂ ಜ್ಯುವೇಲರಿ ಬಂಗಾರದ ಅಂಗಡಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿ ನಗದು ಹಣ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿದ್ದು ಆ ಸಮಯದಲ್ಲಿ ಬೆರಳಚ್ಚು ತಜ್ಞರು ಘಟನಾ ಸ್ಥಳವನ್ನು ಪರೀಶಿಲಿಸಿ ಆಕಸ್ಮಿಕ ಬೆರಳು ಮುದ್ರೆ ಸಂಗ್ರಹಿಸದರಲ್ಲಿ ಸದರ ಬೆರಳು ಮುದ್ರೆಯ ಬೆಂಗಳೂರು ವೈಟ್ ಪಿಲ್ಡ್ ಪೋಲಿಸ್ ಪ್ರಕರಣದಲ್ಲಿ ದಸ್ತಗಿರಿಯಾದ ಮಧ್ಯಪ್ರದೇಶ ಮೂಲದ ಅವಿನಾಶ ತಂದೆ ಹಿಮ್ಮತ ಇತನ ಬೆರಳು ಮುದ್ರೆ ಹೋಲಿಕೆಯಾಗಿದ್ದು ಸದ್ರಿಯವನ ಪತ್ತೆಯ ಕುರಿತು ವಿಷೇಶ ರಚಿಸಿ ಬೆಂಗಳೂರು ಮಂಗಳೂರು ಮುಂತಾದ ಕಡೆ ತಿರುಗಿ ಮಾಹಿತಿ ಸಂಗ್ರಹಿಸಿ ಆತನ ತಂಡದ ಇತರ ಸದಸ್ಯರ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಕರಣದ ಪತ್ತೆಯ ಕಾರ್ಯದಲ್ಲಿ ಇರುವಾಗ ಪ್ರಕರಣದ ಆರೋಪಿಯಾದ ತಿಥಿಯಾ @ತಿಥಿ ತಂದೆ ದುರ್ಗಾ @ಕೂಗ್ರಾ ಮೊಗ್ಯಾ ಪ್ರಾಯ 30 ವರ್ಷ ಉದ್ಯೋಗ:ಬಲೂನ್ ವ್ಯಾಪಾರ ಸಾ|| ಚೌಕಿ:ಬಾದೋನ್ ಠಾಣಾ:ಕಚನಾರ್ ಚೆಕ್:ಮಾದೋಘಡ ತಾಲೂಕು:ಅಶೋಕ ನಗರ ಬೋಪಾಲ್ ಮಧ್ಯಪ್ರದೇಶ ಆತನನ್ನು ಬಂಧಿಸಿ ಆತನಿಂದ ಪ್ರಮುಖ ಮೂರು ಪ್ರಕರಣಗಳಾದ ಸಿಗಂಧೂರು ಜ್ಯೂವೇಲರ್ಸ್ ಪಾಂಡುರಂಗ ಜ್ಯೂವೆಲರ್ಸ್ 2 ಬಂಗಾರದ ಅಂಗಡಿ ಹಾಗೂ ಮನೆ ಕಳ್ಳತನ ಪ್ರಕರಣಕ್ಕೆ ಪಟ್ಟಂತೆ ಒಟ್ಟು 84 ಗ್ರಾಂ ಬಂಗಾರದ ಆಭರಣ ಹಾಗೂ 1kg 400 ಗ್ರಾಂ ಆಗುವಷ್ಟು ಬೆಳ್ಳಿಯ ಆಭರಣಗಳು ಒಟ್ಟು ಅಂದಾಜು 3.5 ಲಕ್ಷ ಮೌಲ್ಯದ ಬಂಗಾರ ಆಭರಣಗಳನ್ನು ವಶ ಪಡಿಸಿಕೊಳ್ಳುವಲ್ಲಿ ಕುಮಟಾದ ಪೋಲಿಸರು ಯಶಸ್ವಿಯಾಗಿರುತ್ತಾರೆ.

RELATED ARTICLES  ಮೀನುಗಾರಿಕೆ ಉದ್ಯಮದಲ್ಲಿ ವೈವೀಧ್ಯೀಕರಣ ಕಾರ್ಯಾಗಾರ ಸಂಪನ್ನ.

ತಂಡದಲ್ಲಿ ಟಿ ಎನ್ ನರಸಿಂಹಮೂರ್ತಿ ಸಿಪಿಐ ಕುಮಟಾ, ಶಶಿಕುಮಾರ್ ಸಿ ಆರ್ ಪಿ ಎಸ್ ಐ ಕುಮಟಾ ಪೋಲಿಸ ಠಾಣೆ ಮಂಜುನಾಥ ಬೋರಕರ ಪಿ ಎಸ್ ಐ (ಅ.ವಿ)ಕುಮಟಾ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ಗಂಗಾಧರ ಹೊಂಗಲ ,ಪ್ರದೀಪ ರೇವಣಕರ, ಸುರೇಶ ಪಟಗಾರ, ಸಂತೋಷ ಬಾಳೇರಿ ,ಚಂದ್ರಕಾಂತ ಗೌಡ ,ಸುಬ್ರಹ್ಮಣ್ಯ ಶೆಟ್ಟಿ ಮುಂತಾದವರು ಭಾಗಿಯಾಗಿದ್ದು ಮಾನ್ಯ ಎಸ್ ಪಿ ಸಾಹೇಬ ಕಾರವಾರದವರು ಈ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿರುತ್ತಾರೆ..

RELATED ARTICLES  ಮಹಿಳೆಯ ಒಳ ಉಡುಪಿನಲ್ಲಿತ್ತು ಚಿನ್ನ : ಭಟ್ಕಳ ಮೂಲದ ಮಹಿಳೆ ಅರೆಸ್ಟ್