ತಾಯಿಯ ಸಂತೋಷ ಮಗುವಿನ ಮನೋಧರ್ಮವನ್ನು ಅವಲಂಬಿಸಿರುತ್ತದೆ ಎಂಬ ನಂಬಿಕೆಗೆ ಸವಾಲೆಸೆಯುವ ವಿಷಯ ಅಧ್ಯಯನವೊಂದರಿಂದ ತಿಳಿದುಬಂದಿದ್ದು ಉದ್ಯೋಗಸ್ಥ ತಾಯಂದಿರ ಸಂತೋಷ ಸ್ವತಃ ಆಕೆಯ ಮನೋಇಚ್ಛೆಗಳು ಮತ್ತು ಅಗತ್ಯಗಳು ಪೂರೈಕೆಯಾದ್ದರ ಮೇಲೆ ಅವಲಂಬಿತವಾಗಿರುತ್ತದೆ.
ಉದ್ಯೋಗಸ್ಥ ತಾಯಿಗೆ ಸ್ವಾತಂತ್ರ್ಯ ಮತ್ತು ತಾನು ಮಾಡುವ ಕೆಲಸಗಳಲ್ಲಿ ಆಯ್ಕೆಗಳಿದ್ದರೆ ಮನೆಯಲ್ಲಿ ತನ್ನ ಮಗುವಿನ ಜೊತೆ ಚೆನ್ನಾಗಿರುತ್ತಾಳೆ ಮತ್ತು ಮಗುವನ್ನು ಖುಷಿ ಖುಷಿಯಾಗಿ ಸಲಹುತ್ತಾ ಪ್ರೀತಿಯ ಬಾಂಧವ್ಯವನ್ನು ತೋರಿಸುತ್ತಾಳೆ.
ಉದ್ಯೋಗಸ್ಥ ಮಹಿಳೆಗೆ ಕೆಲಸದಲ್ಲಿ ಉತ್ತಮ ಅನಿಸಿಕೊಳ್ಳುವುದಲ್ಲದೆ ಇತ್ತ ಮನೆಯಲ್ಲಿ ಮಗುವನ್ನು ಚೆನ್ನಾಗಿ ಸಾಕಿ ಸಲಹುತ್ತಾ ಒಳ್ಳೆಯ ತಾಯಿ ಎನಿಸಿಕೊಳ್ಳಬೇಕೆಂಬ ಒತ್ತಡ ಇರುತ್ತದೆ. ವೃತ್ತಿ ಮತ್ತು ತಾಯ್ತನದ ಸಮತೋಲನ ಕಾಪಾಡಲು ಎಡವಿದಲ್ಲಿ ಮಹಿಳೆ ಸಮಾಜದಲ್ಲಿ ಸ್ನೇಹಿತರು ಮತ್ತು ಬಂಧು ಬಳಗದ ವೃತ್ತದಿಂದ ವಿಮುಖಳಾಗಲು ಪ್ರಯತ್ನಿಸುತ್ತಾಳೆ.
ತಾಯಿಯ ಯೋಗಕ್ಷೇಮ ಭವಿಷ್ಯದಲ್ಲಿ ಪೋಷಕರು ಮತ್ತು ಮಕ್ಕಳ ಗುಣಲಕ್ಷಣಗಳು, ಸಂಬಂಧಗಳ ಸಂಕೀರ್ಣತೆಯನ್ನು ಅಧ್ಯಯನ ಗೊತ್ತುಮಾಡುತ್ತದೆ ಎಂದು ಬೆಲ್ಜಿಯಂನ ಗ್ಹೆಂಟ್ ವಿಶ್ವವಿದ್ಯಾಲಯದ ಸಂಶೋಧಕ ಕ್ಯಾಟ್ರಿಜ್ ಬರ್ನಿಂಗ್ ಹೇಳುತ್ತಾರೆ.
ಈ ಪ್ರಕ್ಷುಬ್ದ ಹಂತದಲ್ಲಿ ಮಗುವಿನ ಮನೋಧರ್ಮ ತಾಯಿಯ ಸಂತೋಷಕ್ಕೆ ಕಾರಣವಾಗುತ್ತದೆ. ಕೆಲವು ಬಹಿರ್ಮುಖಿ ಮಕ್ಕಳು ತಾಯಂದಿರು ಧನಾತ್ಮಕವಾಗಿ ಯೋಚಿಸಲು ಕಾರಣರಾಗುತ್ತಾರೆ ಮತ್ತು ಅಷ್ಟೊಂದು ಹಠ ಮಾಡುವುದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ.
ಅಗತ್ಯ ತೃಪ್ತಿ ಕೊರತೆ, ಹೆಚ್ಚಿನ ಹತಾಶೆ ಮತ್ತು ತಾಯಿಯ ಸ್ವ-ವಿಮರ್ಶೆ ಕಡಿಮೆಯಾದಾಗ ಮಗುವಿನ ಮನೋಧರ್ಮ ಬದಲಾಗುತ್ತದೆ ಎಂದು ಬ್ರೆನ್ನಿಂಗ್ ಹೇಳುತ್ತಾರೆ.
ಹ್ಯಾಪಿನೆಸ್ ಸ್ಟಡೀಸ್ ನಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು 5 ದಿನಗಳ ಕಾಲ 126 ಚೊಚ್ಚಲ ಉದ್ಯೋಗಸ್ಥ ತಾಯಂದಿರ ಮೇಲೆ ಅವರ ಹೆರಿಗೆ ರಜೆ ಮುಗಿದ ನಂತರ ಅಧ್ಯಯನ ನಡೆಸಲಾಯಿತು.