ಶಿರಸಿ:- ಸಹೋದರಿ ನಿವೇದಿತಾ ಅವರ 150ನೇ ಜನ್ಮ ಜಯಂತಿ ಅಂಗವಾಗಿ ಉತ್ತರ ಕನ್ನಡದ ಶಿರಸಿಯಲ್ಲಿ ಎಬಿವಿಪಿ ಕಾರ್ಯಕರ್ತರು ಬ್ರಹತ್ ಸಬಲಶಕ್ತಿ ಸಮಾವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ನಗರದ ಐದುರಸ್ತೆ ಸರ್ಕಲ್ ನಿಂದ ಹೊರಟ ಮಹಾರ್ಯಾಲಿ ಜೂ ಸರ್ಕಲ್ ಮೂಲಕ ರಾಘವೇಂದ್ರ ಕಲ್ಯಾಣ ಮಂಟಪ ತಲುಪಿತು. ನಿವೇದಿತಾ ಜನ್ಮ ಜಯಂತಿ ಅಂಗವಾಗಿ ಎವಿವಿಪಿ ಶಿರಸಿ ಘಟಕದಿಂದ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.

RELATED ARTICLES  ಸ್ವರ್ಣ ಪಾದುಕೆಗೆ ಅದ್ಧೂರಿ ಸ್ವಾಗತ - ಗಮನ ಸೆಳೆದ ಮೆರವಣಿಗೆ.

ಸ್ವಾಮಿ ವಿವೇಕಾನಂದರ ಸಂದೇಶವನ್ನು ಆಲಿಸಿ, ಪಾಶ್ಚಾತ್ಯ ಸಂಸ್ಕ್ರತಿಯನ್ನು ತೊರೆದು ವಿವೇಕಾನಂದರ ಅದರ್ಶದಿಂದ ಪ್ರೇರಣೆಗೊಂಡು ತನ್ನ ದೇಶವನ್ನು ಬಿಟ್ಟು ಭಾರತಕ್ಕೆ ಬಂದು ಈ ದೇಶದ ಸಂಸ್ಕಾರ, ಸಂಸ್ಕ್ರತಿಯನ್ನು ಇಡೀ ಪ್ರಪಂಚದಕ್ಕೆ ಸಾರಿರುವ ಸಹೋದರಿ ನಿವೇದಿತರವರ ವಿಚಾರಗಳನ್ನು ಈಗಿನ ಹೆಣ್ಣುಮಕ್ಕಳಿಗೆ ತಿಳಿಸುವ ಕಾರ್ಯ ಉಪನ್ಯಾಸಕರಿಂದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು.

RELATED ARTICLES  ಸೆಂಟ್ರಿಂಗ್‌ ಕಾರ್ಮಿಕರ ಸಂಘ (ರಿ.) ಭಟ್ಕಳ, ಇದರ ವಾರ್ಷಿಕ ಸಭೆ ಸಂಪನ್ನ.