ಕಾರವಾರ:ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಪ್ರಭಾರಿ ಉಸ್ತುವಾರಿಯಾಗಿರುವ ವಿಕ್ರಮಾರ್ಜುನ್ ತಿಂಗಳೆ ತಮ್ಮ ಲಾಭಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಅಧ್ಯಕ್ಷ ಪ್ರಸಾದ್ ಕಾರವಾರಕರ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಂಗಳೆ ನಾನು ಭೂಗತ ಲೋಕದ ದೊರೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದೇನೆ ನಾನು ಗನ್ ಪಾಯಿಟ್ ಮೇಲೆ ರಾಜಕೀಯ ಮಾಡುವ ವ್ಯಕ್ತಿ ಎಂದು ಹೇಳಿವು ಮೂಲಕ ಬಿಜೆಪಿಯ ಸ್ಥಳೀಯ ನಾಯಕರೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಭೂಗತ ಲೋಕದ ಶರತ್ ಶೆಟ್ಟಿ ನನ್ನ ಅಳಿಯ. ನನ್ನ ಬಗ್ಗೆ ನಿನಗೆ ಇನ್ನು ತಿಳಿದಿಲ್ಲ. ನಾನು ನಾಲ್ಕೈದು ಗನ್‍ಗಳನ್ನು ಇಟ್ಟುಕೊಂಡು ತಿರುಗುತ್ತೇನೆ. ನನ್ನ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದು ಕಳೆದ ಶನಿವಾರ ನಡೆದ ಪಕ್ಷದ ಸಭೆಯಲ್ಲಿ ಬಿಜೆಪಿ ಜಿಲ್ಲಾ ಮಾಜಿ ವಕ್ತಾರ ನಾಗರಾಜ ಜೋಶಿಗೆ ಬೇದರಿಕೆ ಹಾಕಿದ್ದಾರೆ ಇದು ಜಿಲ್ಲಾ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ ಎಂದರು.
ಬಿಜೆಪಿ ಸ್ಥಳೀಯ ನಾಯಕರಿಗೆ ಗನ್ ಪಾಯಿಂಟ್ ತೋರಿಸಿ ರಾಜಕೀಯ ಮಾಡಲು ಹೋರಟಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಉದ್ಯಮಿಯೊಬ್ಬರಿಗೆ ಟಿಕೇಟ್ ಕೋಡಿಸುವುದಕ್ಕೊಸ್ಕರ ಸ್ಥಳೀಯ ನಾಯಕರಿಗೆ ಈ ರೀತಿ ಬೇದರಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನಾಗರಾಜ್ ಜೋಶಿ ಮಾತನಾಡಿ ಕಾರವಾರದಲ್ಲಿ ಕಳೆದ ಶನಿವಾರ ವಿಕ್ರಮಾರ್ಜುನ ತಿಂಗಳೆ ಪಕ್ಷದ ಸಭೆ ಕರೆದಿದ್ದರು. ಅದರಲ್ಲಿ ಕಾರವಾರ ಗ್ರಾಮೀಣ ಘಟಕದ ಅಧ್ಯಕ್ಷ ರಾಜನ್ ಕೋಳಂಕರ್ ಗೈರಾಗಿದ್ದರಿಂದ ವಿಕ್ರಮಾರ್ಜುನ್ ತಿಂಗಳೆ ಅವರು ಗ್ರಾಮೀಣ ಘಟಕದ ಅಧ್ಯಕ್ಷರನ್ನು ವಜಾ ಮಾಡುವುದಾಗಿ ಸೂಚಿಸಿದ್ದಾರೆ. ಆದರೆ ಗ್ರಾಮೀಣ ಘಟಕದ ಅಧ್ಯಕ್ಷರು ಬಿಜೆಪಿ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿದ್ದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೇ ನೀಡಿದರೇ ಕೇಳುವ ತಾಳ್ಮೆ ಇಲ್ಲದೆ ಬೇದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.