ಭಟ್ಕಳ: ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಮತ್ಯಗಂಧಾ ರೈಲಿನಲ್ಲಿ ಅನಧೀಕೃತವಾಗಿ ಗೋವಾ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಸಂಧರ್ಭದಲ್ಲಿ ಭಟ್ಕಳ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ಯಗಂಧಾ ರೈಲಿನಲ್ಲಿ ಮಹಿಳಾ ಬೋಗಿಯಲ್ಲಿ ವಾರಸುದಾರರಿಲ್ಲದ ಮೂರು ಚೀಲಗಳು ಪತ್ತೆಯಾಗಿದ್ದದ್ದು, ಇದನ್ನು ಇಲ್ಲಿನ ರೈಲ್ವೆ ಪೊಲೀಸ ಶಿಸ್ಪಾಲ್ ಸಿಂಗ್ ಮತ್ತು ಸಿ.ಟಿ. ಪ್ರವೀಣ ತಪಾಸಣೆ ನಡೆಸಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES  ಅಪಘಾತ : ಬೈಕ್ ಸವಾರ ಸಾವು.

ರೈಲಿನಲ್ಲಿ ಒಟ್ಟು 72 ಮದ್ಯದ ಬಾಟಲಿ ಪತ್ತೆಯಾಗಿದ್ದು, ಅಂದಾಜು 21,600ರೂ.ಗಳು ಮೌಲ್ಯ ಎಂದು ಗುರುತಿಸಲಾಗಿದೆ. ವಶಕ್ಕೆ ಪಡೆದ ಮದ್ಯವನ್ನು ರೈಲ್ವೆ ಪೋಲೀಸರು ನಂತರ ಜಪ್ತುಪಡಿಸಿಕೊಂಡ ಮದ್ಯವನ್ನು ಅಬಕಾರಿ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ.

RELATED ARTICLES  ನಾಗರಾಜ ನಾಯಕ ತೊರ್ಕೆ ನೇತ್ರತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ವೃಕ್ಷಾರೋಪಣ