ನವದೆಹಲಿ: ವಿಶ್ವದ ಅತ್ಯಂತ ಹೆಚ್ಚು ಬಳಕೆಯ ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ತನ್ನ ಗ್ರಾಹಕರನ್ನು ಸೆಳೆಯಲು ಮತ್ತೊಂದು ಹೊಸ ಫೀಚರ್ ನೀಡಿದ್ದು, ಹೊಸದಾಗಿ ಬಳಕೆದಾರನಿಗೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ ನೀಡಿದೆ.

ಈ ಆಯ್ಕೆಯ ಮೂಲಕ ಬಳಕೆದಾರ ಏಕಕಾರಲದಲ್ಲಿ ಹಲವು ಟ್ವೀಟ್ ರೂಪಿಸಬಹುದು ಮತ್ತು ಏಕಕಾಲದಲ್ಲಿ ಅವಗಳನ್ನು ಪೋಸ್ಟ್ ಕೂಡ ಮಾಡಬಹುದಾಗಿದೆ. ಟ್ವಿಟರ್ ವೆಬ್ ಸೈಟ್ ಅಥವಾ ಟ್ವಿಟರ್ ಮೊಬೈಲ್ ಆ್ಯಪ್ ನಲ್ಲಿ ಆಯ್ಕೆ ಲಭ್ಯವಿದ್ದು, ಬಳಕೆದಾರರು ಟ್ವೀಟ್ ಮಾಡುವಾಗ ಕಂಪೋಸರ್ ನ ಕಳಗೆ ಪ್ಲಸ್ ಎಂಬ ಚಿನ್ಹೆಯನ್ನು ನೀಡಲಾಗಿದ್ದು ಈ ಚಿನ್ಹೆ ಒತ್ತಿದರೆ ಮತ್ತೊಂದು ಟ್ವೀಟ್ ಕಂಪೋಸಿಂಗ್ ಆಯ್ಕೆ ತೆರೆದುಕೊಳ್ಳುತ್ತದೆ. ಆ ಮೂಲಕ ಬಳಕೆದಾರ ಒಂದಕ್ಕಿಂತ ಹೆಚ್ಚು ಟ್ವೀಟ್ ಗಳನ್ನು ಏಕಕಾಲದಲ್ಲಿ ಸೃಷ್ಟಿ ಮಾಡಬಹುದಾಗಿದೆ.

RELATED ARTICLES  ಇಂದಿನ ಪ್ರಮುಖ ತಾಲೂಕಿನ ಮಾರುಕಟ್ಟೆ ಧಾರಣೆ

ಹಿಂದೆ ಆ ಆಯ್ಕೆ ಇರಲಿಲ್ಲ. ಆಗ ಬಳಕೆದಾರ ತನ್ನ ಟ್ವೀಟ್ ಗಳಿಗೆ ಒಂದು, ಎರಡು, ಮೂರು ಎಂದು ಹೀಗೆ ಅಂಕಿಗಳ ನೀಡಬೇಕಿತ್ತು. ಈ ಅನಾನುಕೂಲ ತಪ್ಪಿಸಲೆಂದೇ ಟ್ವಿಟರ್ ಈ ಹೊಸ ಮಲ್ಟಿ ಥ್ರೆಡ್ ನೀಡಿದೆ.

RELATED ARTICLES  ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಗೋಕರ್ಣ ಪೊಲೀಸರು.