ಕುಮಟಾ; ಕೇಂದ್ರ ಸರಕಾರ ಏಕಾಏಕಿಯಾಗಿ ಲೈಟ್ ಪೀಶಿಂಗ್‍ನ್ನು ನಿಷೇಧಿಸಬೇಕೆಂದು ಆದೇಶ ಜಾರಿಮಾಡಿರುವುದರಿಂದ ಮೀನುಗಾರರಿಗೆ ಉದ್ಯೋಗಕ್ಕೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಪರ್ಷಿಯನ್ ಬೋಟ್ ಮೀನುಗಾರ ಸಂಘದ ವತಿಯಿಂದ ಕುಮಟಾದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಪರ್ಷಿಯನ್ ಬೋಟ್ ಮೀನುಗಾರರ ಸಂಘ ಗೌರವಾಧ್ಯಕ್ಷ ಬಾಬು ಕುಬಾಲ್ ಮಾತನಾಡಿ, ಇವತ್ತು ಉಡುಪಿ, ಮಂಗಳೂರ ಜಿಲ್ಲೆಯಲ್ಲಿ ಲೈಟ್ ಫಿಶಿಂಗ್ ನಿಲ್ಲಿಸಿಲ್ಲ ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರ್ಷಿಯನ್ ಬೋಟನವರು ಲೈಟ್ ಫಿಶಿಂಗ್ ನಿಲ್ಲಿಸಿದ್ದಾರೆ. ಕೇಂದ್ರ ಸರಕಾರ ಯಾವುದೇ ಒಂದು ಮೀನುಗಾರ ಇಲಾಖೆಗಾಗಲಿ, ಕರ್ನಾಟಕ ಸರಕಾರಕ್ಕಾಗಲಿ ತಿಳಿಸದೆ ಇಂದು ಲೈಟ್ ಫಿಶಿಂಗ್ ಅವೈಜ್ಞಾನಿಕ ಎಂದು ಆದೇಶ ಹೊರಡಿಸಿದಕ್ಕೆ ನಮ್ಮ ಎಲ್ಲಾ ಮೀನುಗಾರರ ಸಂಘದವರು ಇದನ್ನ ಖಂಡಿಸುತ್ತೇವೆ ಎಂದರು.

RELATED ARTICLES  ಸಿ.ಒ.ಡಿ ಅಧಿಕಾರಿ ಎಂದು ಹೇಳಿಕೊಂಡ ನಕಲಿ ವ್ಯಕ್ತಿ ಶಿರಸಿಯಲ್ಲಿ ವಿವಿಧ ಲ್ಯಾಬ್ ಮಾಹಿತಿ ಸಂಗ್ರಹಿಸಿದ.

ಅಖಿಲ ಕರ್ನಾಟಕ ಪರ್ಷಿಯನ್ ಬೋಟ ಕಾನೂನೂ ಸಲಹೆಗಾರ ಗಣಪತಿ ಮಾಂಗ್ರೆ ಮಾತನಾಡಿ, ಮೀನುಗಾರರು ಆರ್ಥಿಕ ಸುಧಾರಣೆಗಾಗಿ ಮೀನುಗಳನ್ನು ಹಿಡಿಯುವ ಬಲೆಗಳನ್ನು ಖರೀದಿಗಾಗಿ ಬ್ಯಾಂಕ್‍ಗಳಲ್ಲಿ ಸಾಲಗಳನ್ನು ಮಾಡಿರುತ್ತಾರೆ, ಆದರೆ ಕೇಂದ್ರ ಸರಕಾರವು ಏಕಾಏಕಿಯಾಗಿ ಮೀನುಗಾರಿಕೆ ಇಲಾಖೆಗಳಿಗೆ ತಿಳಿಸದೆ ತಮ್ಮಷ್ಟೆಕ್ಕೆ ತಾವೆ ಈ ಕಾನೂನು ಜಾರಿಗೆ ಮಾಡಿದ್ದಾರೆ. ಇದರಿಂದ ಸಾವಿರಾರು ಮೀನುಗಾರರರು ಬಿದಿಪಾಲಾಗುವ ಸಂದರ್ಭವಿರುತ್ತದೆ. ರೈತರು ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೋ ಅದೇ ರೀತಿ ಮೀನುಗಾರರು ಕೂಡಾ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗುತ್ತದೆ ಎಂದರು. ನಮ್ಮ ಕರಾವಳಿ ಭಾಗದ ಉಡುಪಿ, ಮಂಗಳೂರು, ಉತ್ತರಕನ್ನಡ ಈ ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಭಾಗದ ಮೀನುಗಾರರ ಸಮಸ್ಯೆಯನ್ನ ಸರಕಾರಕ್ಕೆ ತಿಳಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES  ಆತ್ಮಹತ್ಯೆಗೆ ಶರಣಾದ ಯುವತಿ

ಈ ಸಂದರ್ಭದಲ್ಲಿ ಅರವಿಂದ್ ಹೊಸಕಟ್ಟಾ, ಗಣಪತಿ ಬಾಳಾವರ, ಜಟಕಾ ಮೋಗೆರ ಹಾಗೂ ಎಲ್ಲಾ ತಾಲೂಕಿನ ಪರ್ಷಿಯನ್ ಬೋಟ್ ಸಂಘದ ಅಧ್ಯಕ್ಷರು, ಸದ್ಯಸರು, ಮೀನುಗಾರರು ಉಪಸ್ಥಿತಿರಿದ್ದರು.