ಕಾರವಾರ:ಜ25ರಂದು ಆಚರಿಸಲಾಗುವ ರಾಷ್ಟ್ರೀಯ ಮತದಾರರ ದಿನಾಚರಣೆ ತಾಲೂಕು ಕಾರ್ಯಕ್ರಮಗಳಿಗೆ ಸಹಸ್ರಮಾನದ ಮತದಾರ (ಮಿಲೇನಿಯಂ ವೋಟರ್)ರನ್ನು ಆಹ್ವಾನಿಸುವಂತೆ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಎಲ್ಲ ತಹಸೀಲ್ದಾರ್ ಅವರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು, ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರೀಯ ಮತದಾರರ ಚುನಾವಣೆ ಜಿಲ್ಲಾದ್ಯಂತ ಆಚರಿಸಬೇಕಿದೆ. ತಾಲೂಕು ಕೇಂದ್ರಗಳಲ್ಲಿ ರಾಷ್ಟ್ರೀಯ ಮತದಾರರ ಚುನಾವಣೆ ಆಚರಿಸುವಾಗ 01-01-2000ರಲ್ಲಿ ಜನಿಸಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಮಿಲೇನಿಯಂ ವೋಟರ್ ಅನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸುವಂತೆ ತಿಳಿಸಿದರು.

ಅಲ್ಲದೆ, ಈ ಕಾರ್ಯಕ್ರಮಕ್ಕೆ ಎಲ್ಲ ಸ್ಥಳೀಯ ಸಂಘ ಸಂಸ್ಥೆಗಳನ್ನು, ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳನ್ನು ಆಹ್ವಾನಿಸಬೇಕು. ಈ ವರ್ಷ ಚುನಾವಣೆ ವರ್ಷವಾಗಿರುವುದರಿಂದ ಮತದಾರರ ಪಟ್ಟಿ, ಮತಗಟ್ಟೆ ಸೌಲಭ್ಯಗಳು ಹಾಗೂ ಮತದಾರರಿಗೆ ಮತದಾನದ ಶೈಕ್ಷಣಿಕ ಕಾರ್ಯಕ್ರಮಗಳೂ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಈಗಾಗಲೇ ತಿಳಿಸಿರುವಂತೆ ಪ್ರತಿ ಶಾಲಾ ಕಾಲೇಜುಗಳಲ್ಲಿ ಕ್ಯಾಂಪಸ್ ಅಂಬಾಸಿಡರ್‍ಗಳನ್ನು ನೇಮಿಸಬೇಕು. ಆಯಾ ಕಾಲೇಜು ಉಪನ್ಯಾಸಕರ ನೇತೃತ್ವದಲ್ಲಿ ಮತದಾರರ ಶೈಕ್ಷಣಿಕ ಕ್ಲಬ್‍ಗಳನ್ನು ರಚಿಸಿ ವರದಿ ಸಲ್ಲಿಸುವಂತೆ ಅವರು ತಿಳಿಸಿದರು.

RELATED ARTICLES  ಗಮನಸೆಳೆದ ನೃತ್ಯ ಪ್ರದರ್ಶನ "ನೂಪುರನಾದ ನೃತ್ಯೋತ್ಸವ" ಯಶಸ್ವಿ

ಮತಗಟ್ಟೆಗಳಲ್ಲಿ ಮೂಲಸೌಲಭ್ಯಗಳ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ ಅವರು, ಪ್ರತಿ ಮತಗಟ್ಟೆಗಳ ತಲಾ ಎರಡು ಛಾಯಾಚಿತ್ರಗಳನ್ನು ತೆಗೆದು ಚುನಾವಣಾ ಆಯೋಗದ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಬೇಕು. ಅಲ್ಲದೆ, ಮತಗಟ್ಟೆಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳಿವೆಯೇ ಎಂಬ ಬಗ್ಗೆ ಖಾತರಿಪಡಿಸಿಕೊಂಡು ಅವಶ್ಯಕತೆ ಇರುವೆಡೆ ಅಂತಹ ಸೌಲಭ್ಯಗಳನ್ನು ಕಲ್ಪಿಸಬೇಕು. ವಿಕಲಾಂಗರಿಗೆ ಮತದಾನಕ್ಕೆ ಅನುಕೂಲವಾಗುವಂತೆ ರ್ಯಾಂಪ್ ಇತ್ಯಾದಿ ಸೌಲಭ್ಯಗಳನ್ನು ಮತಗಟ್ಟೆಗಳಲ್ಲಿ ಕಲ್ಪಿಸಬೇಕು ಎಂದರು.

RELATED ARTICLES  ಅಂಬುಲೆನ್ಸನಲ್ಲಿಯೇ ಕುಳಿತಿದ್ದ ಜವರಾಯ: ಹಾರಿ ಹೋಯ್ತು ಮೂವರು ಕಾರವಾರದವರ ಜೀವ.!

ಅಲ್ಲದೆ ಕೆಲವೊಮ್ಮೆ ಮತಗಟ್ಟೆ ಬದಲಾವಣೆ ಸಾಧ್ಯತೆಗಳಿದ್ದು ಒಂದೊಮ್ಮೆ ಬದಲಾವಣೆ ಆಗಿದ್ದರೆ ತಕ್ಷಣ ಮಾಹಿತಿ ನೀಡಬೇಕು ಹಾಗೂ ಬದಲಾದ ಮತಗಟ್ಟೆಯಲ್ಲಿ ಸೌಲಭ್ಯಗಳಿವೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಚುನಾವಣೆ ವೀಕ್ಷಕರು ಈ ಎಲ್ಲವನ್ನೂ ಗಮನಿಸಲಿದ್ದು ಕೊನೆಯ ಕ್ಷಣದವರೆಗೆ ಕಾಯಬಾರದು ಎಂದು ಅವರು ತಿಳಿಸಿದರು.