ಹೊನ್ನಾವರ : ಡಿ 8 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪರೇಶ್ ಮೇಸ್ತ ಕುಟುಂಬಕ್ಕೆ ಸರಕಾರ ಒಂದು ತಿಂಗಳ ನಂತರ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದೆ. ಹೊನ್ನಾವರ ತಹಶಿಲ್ದಾರರಿಂದ ಮೃತ ದುರ್ದೈವಿ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತ ಚೆಕ್ ಪಡೆದಿದ್ದಾರೆ.
ಕೆಲದಿನದ ಹಿಂದೆ ಮಂಗಳೂರಿನಲ್ಲಿ ದುರದೃಷ್ಟವಶಾತ್ ಬಲಿಯಾದ ಬಷೀರ್ ಮನೆಗೆ ಖುದ್ದು ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯನವರು 10 ಲಕ್ಷ ಪರಿಹಾರ ಗೊಷಿಸಿದ್ದನ್ನು ಇಲ್ಲಿ ಜನ ನೆನಪಿಸಿದರು.ಪರೇಶ್ ಪ್ರಕರಣದಲ್ಲಿ ಸರಕಾರ ನಿರ್ಲಕ್ಷ ವಹಿಸಿದಂತಿದೆ ಎಂದು ಅಳುಕು ವ್ಯಕ್ತಪಡಿಸಿದರು.
ಹೊನ್ನಾವರ ಗಲಭೆ ಸಂದರ್ಭದಲ್ಲಿ ಡಿಸೆಂಬರ್ 6 ರಂದು ಪರೇಶ್ ನಾಪತ್ತೆಯಾಗಿದ್ದ. ಇದಾದ ಬಳಿಕ ಡಿ 8ರಂದು ಪರೇಶನ ಶವ ಅನುಮಾನಾಸ್ಪದವಾದ ರೀತಿಯಲ್ಲಿ ಹೊನ್ನಾವರ ಶೆಟ್ಟಿಕೆರೆಯಲ್ಲಿ ಪತ್ತೆಯಾಗಿತ್ತು.
ಘಟನೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಸಾಕಷ್ಟು ಹೋರಾಟ ಸಹ ನಡೆದಿತ್ತು. ಅಲ್ಲದೆ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಪರೇಶ ಮೇಸ್ತಾನ ಮನೆಗೆ ತೆರಳಿ ತಮ್ಮ ಕೈಯಿಂದ 1 ಲಕ್ಷ ಹಣವನ್ನು ನೀಡಿದ್ದರು. ಆದರೆ, ಕೆಲವು ದಿನಗಳ ನಂತರದಲ್ಲಿ ಪರೇಶ ಮೇಸ್ತಾನ ತಂದೆ ಕಮಲಾಕರ ಮೇಸ್ತಾ ಅವರು ಸಚಿವರು ನೀಡಿದ ಹಣವನ್ನು ವಾಪಸ್ ಮಾಡಿ, ನಮಗೆ ನ್ಯಾಯ ಬೇಕು. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಹಾಗೂ ಸರಕಾರದಿಂದ ಪರಿಹಾರ ನೀಡುವಂತಾಗಬೇಕು ಅಂತಾ ಒತ್ತಾಯಿಸಿದ್ದರು. ತದನಂತರ ಸರ್ಕಾರ ಸಿಬಿಐಗೆ ಪ್ರಕರಣ ಹಸ್ತಾಂತರಿಸುವುದಾಗಿ ಗೋಷಣೆ ಮಾಡಿತ್ತು.
ಆದರೆ, ಇಲ್ಲಿಯವರೆಗೆ ಸಿಬಿಐನಿಂದ ಈ ಕುರಿತು ಯಾವುದೇ ತನಿಖೆ ಶುರುವಾಗಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸಿಬಿಐಗೆ ಪ್ರಕರಣ ಹಸ್ತಾಂತರದ ಕುರಿತು ಸತ್ಯಾಸತ್ಯತೆಯ ಬಗ್ಗೆ ಅನೇಕ ಪ್ರಶ್ನೆಗಳು ಎಳುತ್ತಿದ್ದು, ಇನ್ನೂ ಯಾವುದೇ ದೃಡೀಕರಣವಾಗಿಲ್ಲ. ಒಟ್ಟಿನಲ್ಲಿ, ಪರೇಶ್ ಸಾವಿನ ಒಂದು ತಿಂಗಳ ಬಳಿಕ ಸರಕಾರದಿಂದ ಪರಿಹಾರದ ಹಣವನ್ನು ನೀಡಿ ಕಣ್ಣಿರು ಒರೆಸುವ ಕೆಲಸ ಮಾಡಿದೆಯೇ ಎಂಬುದೇ ಈಗಿರುವ ಪ್ರಶ್ನೆ???