ಹೊನ್ನಾವರ: ತಾಲೂಕಿನಲ್ಲಿ ಸಾವಿಗೀಡಾದ ಪರೇಶ ಮೇಸ್ತ ಸಾವಿನ ತನಿಖೆಯಲ್ಲಿ ಸರಕಾರ ತಾರತಮ್ಯ ಮಾಡುತ್ತಿರುವಂತಿದೆ ಹಾಗೂ ಸರಕಾರ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಹೊನ್ನಾವರದಲ್ಲಿ ಬಿಜೆಪಿ ಪ್ರಮುಖರು ಹಾಗೂ ವಿವಿಧ ಸಂಘಟನೆಯವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಮಂಗಳೂರಿನಲ್ಲಿ ಸಾವು ಸಂಭವಿಸಿದಾಗ ಮನೆಗೆ ಭೇಟಿ ನೀಡುವ ಮುಖ್ಯಮಂತ್ರಿ ೧೦ ಲಕ್ಷ ಪರಿಹಾರ ನೀಡುತ್ತಾರೆ .ಆದರೆ ಹೊನ್ನಾವರದ ಪರೇಶ ಮೇಸ್ತಾ ಸಾವಿನ ನಂತರ ಈ ಪ್ರಕರ್ಣದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.
5 ಲಕ್ಷ ಪರಿಹಾರ ಈಗ ನೀಡಿ ನಂತರ ಮತ್ತೆ ಕಂತಿನ ರೀತಿಯಲ್ಲಿ ಪರೇಶ ಮೇಸ್ತಾ ಕುಟುಂಬಕ್ಕೆ ಪರಿಹಾರ ನೀಡುತ್ತಿರುವುದು ನೋಡಿದರೆ ಇದರಲ್ಲಿ ಸರಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಶಿವರಾಜ ಮೇಸ್ತ ಬೇಸರ ವ್ಯಕ್ತಪಡಿಸಿದರು.
ಗ್ರಹ ಸಚಿವ ರಾಮಲಿಂಗಾರೆಡ್ಡಿ ಸಿ.ಬಿ.ಐ ಗೆ ವಹಿಸುವ ಬಗ್ಗೆ ಮಾಧ್ಯಮಕ್ಕೆ ಹೇಳಿದರೇ ವಿನಃ ಯಾವುದೇ ದಾಖಲೆಗಳನ್ನು ನೀಡಿಲ್ಲ. ಇದು ಸಾಕ್ಷಿ ನಾಶ ಮಾಡುವ ಹುನ್ನಾರದಂತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪರೇಶ ಮೇಸ್ತ ತಂದೆ ಕಮಲಾಕರ ಮೇಸ್ತ, ರಾಜು ಮೇಸ್ತ,ಉಮೇಶ ಸಾರಂಗ ಹಾಗೂ ಇನ್ನಿತರರು ಹಾಜರಿದ್ದರು.