ಶಿವಮೊಗ್ಗ : ಮೀಟರ್ ಬಡ್ಡಿ ದಂಧೆಗೆ ಬೇಸತ್ತು ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಸಿಗೇಹಟ್ಟಿ ಬಡಾವಣೆಯಲ್ಲಿ ನಡೆದಿದೆ.

43 ವರ್ಷದ ಸತ್ಯನಾರಯಣ ನೇಣಿಗೆ ಶರಣಾದ ವ್ಯಕ್ತಿ. ಸತ್ಯನಾರಯಣ್ ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ವಿಳ್ಯದೆಲೆ ವ್ಯಾಪಾರ ಮಾಡುತ್ತಿದ್ದರು.

ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಂದ ಸ್ನೇಹಿತನೊಬ್ಬನಿಗೆ ಜಾಮೀನು ಆಗಿ 10 ಸಾವಿರ ಹಣವನ್ನು ಕೂಡಿಸಿದ್ದರು ಸತ್ಯನಾರಯಣ್ ,

RELATED ARTICLES  ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಇನ್ನಿಲ್ಲ.

ಹಣ ಪಡೆದಿದ್ದ ಸ್ನೇಹಿತ ಸರಿಯಾದ ಸಮಯಕ್ಕೆ ಬಡ್ಡಿ ಕಟ್ಟದೆ ಇರುವ ಕಾರಣ. ಹಣ ನೀಡಿದ್ದ ವ್ಯಕ್ತಿ, ಸತ್ಯನಾರಯಣ ಬಳಿ ಬಂದು ಬಡ್ಡಿಕಟ್ಟುವಂತೆ ಹಿಂಸೆ ನೀಡುತ್ತಿದ್ದರು.

RELATED ARTICLES  ಉತ್ತರ ಕನ್ನಡದ ಇಂದಿನ ಕೊರೋನಾ Update : ಜಿಲ್ಲಾಡಳಿತ ಬಿಡುಗಡೆಮಾಡಿರುವ ಹೆಲ್ತ ಬುಲೆಟಿನ್ ಇಲ್ಲಿದೆ

ಸತ್ಯನಾರಯಣ ತನ್ನ ಕೈಯಿಂದಲೇ ಮೂರು ತಿಂಗಳು ಬಡ್ಡಿ ಹಣ ಕಟ್ಟಿದ್ದರು. ಆದರೆ ಇಂದು ಬಡ್ಡಿ ದಂಧೆಗೆ ಬೇಸತ್ತು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

More Post