ಶಿವಮೊಗ್ಗ : ವ್ಯಕ್ತಿಯೋರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಮಲ್ಲಿಕಾರ್ಜುನ ನಗರದಲ್ಲಿ ನಡೆದಿದೆ. 35 ವರ್ಷದ ಮಂಜುನಾಥ್ ಎಂಬಾತನೇ ಮೃತ ವ್ಯಕ್ತಿ.

ವೃತ್ತಿಯಲ್ಲಿ ಪೇಂಟರ್ ಆಗಿದ್ದ ಮಂಜುನಾಥ್ ಶಿವಮೊಗ್ಗದ ಚೌಡೇಶ್ವರಿ ನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ ಎಂದು ತಿಳಿದು ಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಂಜುನಾಥ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

RELATED ARTICLES  ವರನನ್ನು ಆಕೆ ಚಿನ್ನವೇ ತನಗೆ ಬೇಡ ಎಂದು, ವರನನ್ನು ಬಹುಮಾನವಾಗಿ ಕೇಳಿದ್ದೇನು ಗೊತ್ತಾ..?

ಇನ್ನೂ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಶಿವಮೊಗ್ಗ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಉರುಳಿಗೆ ಸಿಲುಕಿ ಮೃತಪಟ್ಟ ಕಪ್ಪು ಚಿರತೆ...!

ಶಿವಮೊಗ್ಗ,ಯುವಕನ ಬರ್ಬರ ಹತ್ಯೆ,ಹಳೇ ವೈಷಮ್ಯ, ಕೊಲೆ ಶಂಕೆ,