ನವದಹಲಿ: ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತಿರುವ ಚೆಕ್‌ಬುಕ್ ಸೌಲಭ್ಯವನ್ನು ಹಿಂಪಡೆಯುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತಂತೆ ಇಂದು ಟ್ವೀಟ್ ಮಾಡಿರುವ ಅವರು, ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡುವ ಭಾಗವಾಗಿ ಚೆಕ್‌ಬುಕ್ ಬಳಕೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಡಿಜಿಟಲ್ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಒತ್ತು ನೀಡಲಿದೆ ಎಂಬುದು ಸತ್ಯ. ಈ ಮೂಲಕ ನಗದು ವ್ಯವಹಾರಗಳ ಪ್ರಮಾಣವನ್ನು ಕಡಿಮೆ ಮಾಡಿ, ಡಿಜಿಟಲ್ ವ್ಯವಹಾರ ಹೆಚ್ಚಿಸುವುದು, ಇದಕ್ಕಾಗಿ ವ್ಯವಹಾರ ಉನ್ನತೀಕರಿಸುವುದು ನಮ್ಮ ಗುರಿ. ಹಾಗೆಂದು ಈಗಿರುವ ಚೆಕ್‌ಬುಕ್ ಸೌಲಭ್ಯವನ್ನು ಹಿಂಪಡೆಯುವ ಪ್ರಸ್ತಾವನೆ ಸರ್ಕಾರ ಮುಂದಿಲ್ಲ ಎಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ.

RELATED ARTICLES  ವಾರ್ಡ ಗೊಂದಲ : ಕುಮಟಾ ದೇವಗಿರಿ ಪಂಚಾಯತ ವ್ಯಾಪ್ತಿಯಲ್ಲಿ ಮತದಾನ ಬಹಿಷ್ಕಾರ

ವ್ಯಾಪಾರ ಹಾಗೂ ವಾಣಿಜ್ಯ ವ್ಯವಹಾರಗಳಿಗೆ ಚೆಕ್ ಬೆನ್ನೆಲುಬಾಗಿದ್ದು, ಇದು ಹಣ ಪಾವತಿಯ ಒಂದು ಪ್ರಮುಖ ಭಾಗವೇ ಆಗಿದೆ. ಅಲ್ಲದೇ ಇದು ನೆಗೋಶಬಲ್ ಇನ್‌ಸ್ಟ್ರುಮೆಂಟ್ ಅಡಿಯಲ್ಲಿ ಬರುತ್ತದೆ. ಅಲ್ಲದೇ ವ್ಯವಹಾರಗಳ ಭದ್ರತೆಗೆ ಅತ್ಯಂತ ಪೂರಕವಾಗಿರುವ ಇದನ್ನು ಬದಲಾವಣೆ ಮಾಡುವುದಿಲ್ಲ ಎಂದಿದೆ.

RELATED ARTICLES  'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂಬಂತೆ ಎಲ್ಲರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ : ದಿನಕರ ಶೆಟ್ಟಿ

2017-18ರ ಬಜೆಟ್ ಭಾಷಣದಲ್ಲಿ ಮಾತನಾಡಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ, ಕೇಂದ್ರ ಸರ್ಕಾರ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಹಣ ಪಾವತಿ ಹಾಗೂ ವ್ಯವಹಾರಗಳಿಗೆ ಚೆಕ್‌ಗಿಂತಲೂ ಡಿಜಿಟಲ್ ಟ್ರಾನ್ಸಾಕ್ಷನ್ ಪೂರಕವಾದುದು ಎಂದಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚೆಕ್‌ಬುಕ್ ಸೌಲಭ್ಯವನ್ನು ಹಿಂಪಡೆಯುತ್ತದೆ ಎಂದು ಹೇಳಲಾಗಿತ್ತು.