ಶಿರಸಿ: ಯುವಜನತೆಯನ್ನು ತಪ್ಪುದಾರಿಗೆ ಎಳೆದರೆ ಭಾರತವನ್ನು ನಾಶಮಾಡಬಹುದೆಂದು ಶತುೃರಾಷ್ಟ್ರಗಳಿಗೆ ಗೊತ್ತಿದೆ. ಮಾದಕದ್ರವ್ಯದ ಚಟದಲ್ಲಿ ಬಿದ್ದ ಸಮಾಜ ಸಂಪೂರ್ಣವಾಗಿ ಅವನತಿಯತ್ತ ಮುಖಮಾಡುತ್ತದೆ ಎಂದು ಡಾ.ಸಚಿನ್ ಪರಬ್ ಹೇಳಿದರು.

ಅವರು ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಮಹಿಳಾ ಸಾಂತ್ವನ ವೇದಿಕೆ, ಇನ್ನರ್ ವೀಲ್ ಕ್ಲಬ್, ಸಮಾಜಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕದ್ರವ್ಯ ವಿರೋಧಿ ಜಾಗೃತಿ ಉಪನ್ಯಾಸ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದರು.

RELATED ARTICLES  ಇಂದಿನ(ದಿ-18/12/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಭಾರತದ ಭವಿಷ್ಯ ಉಜ್ವಲಗೊಳ್ಳಬೇಕಾದರೆ ಮಾದಕದ್ರವ್ಯಮುಕ್ತ ಸಮಾಜ ನಿರ್ಮಾಣಗೊಳ್ಳಬೇಕು. ಇಂದು ಮೊಬೈಲ್ ಇಂಟರ್ನೆಟ್ ಮುಂತಾದ ಹೊಸರೀತಿಯ ಪಿಡುಗುಗಳು ನಮ್ಮನ್ನು ಆವರಿಸಿವೆ. ಅವುಗಳಿಂದ ಹೊರಬಂದರೆ ಮಾತ್ರ ಸಶಕ್ತ ಯುವಪಡೆಯನ್ನು ರೂಪುಗೊಳಿಸಲು ಸಾಧ್ಯ ಎಂದರು.

RELATED ARTICLES  ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಶುಭಾರಂಭ: ಜನ ಮನ ಗೆದ್ದ ವೈವಿದ್ಯಮಯ ಕಾರ್ಯಕ್ರಮಗಳು.

ಅಧ್ಯಕ್ಯತೆಯನ್ನು ವಹಿಸಿದ್ದ ದಂತವೈದ್ಯ ಡಾ| ಟಿ ನಾರಾಯಣ ಭಟ್ ಮಾತನಾಡಿ ಮದ್ಯ,ತಂಬಾಕು ಮುಂತಾದವುಗಳಿಂದ ಯುವಜನಾಂಗವು ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದೆ. ಈ ಬಗ್ಗೆ ಸ್ವಜಾಗೃತಿಯನ್ನು ಅವರೇ ಮೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳೇ ಮಾರ್ಗದರ್ಶಕರಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಬ್ರಹ್ಮಕುಮಾರಿ ವೀಣಾಜೀ, ಮಹಿಳಾ ಸಾಂತ್ವನ ವೇದಿಕೆಯ ಡಾ. ವಿಜಯನಳಿನಿ ರಮೇಶ್ ಉಪಸ್ಥಿತರಿದ್ದರು.