ಕುಮಟಾ:ತಾಲೂಕಿನ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಿರೇಗುತ್ತಿಯ ಸೆಕೆಂಡರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ ನ ಅಡಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಇತರ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರÀಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚು ಅಂಕ ಗಳಿಸಿದವರು ಜಾಣರು ಕಡಿಮೆ ಅಂಕ ಗಳಿಸಿದವರು ದಡ್ಡರು ಎಂಬ ಕೀಳರಿಮೆ ಬೇಡ. ಪ್ರತಿಯೊಬ್ಬರಲ್ಲೂ ಒಂದು ವಿಭಿನ್ನವಾದ ಪ್ರತಿಭೆ ಅಡಗಿರುತ್ತದೆ. ಪ್ರತಿಭೆ ಎನ್ನುವುದು ಯಾರೊಬ್ಬರ ಸೊತ್ತಲ್ಲ. ಯಾವುದೇ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನಗಳ ಅಗತ್ಯತೆ ಇದೆ. ಪ್ರಯತ್ನ ನಮ್ಮದು ಪ್ರತಿಫಲ ದೇವರಿಗೆ ಬಿಟ್ಟಿದ್ದು ಎಂದು ಮುನ್ನಡೆಯಬೇಕು. ನಮಗೆ ಎಲ್ಲವನ್ನೂ ನೀಡಿದ ಈ ಸಮಾಜಕ್ಕೆ ಕಿಂಚಿತ್ತಾದರೂ ಸೇವೆ ಸಲ್ಲಿಸಬೇಕೆಂಬ ಮನೋಭಾವನೆಯನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆದು ತಾವುಗಳು ಸಶಕ್ತರಾದಾಗ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

RELATED ARTICLES  ಸೈಲ್ ರಿಂದ ಮಾದರಿ ಗ್ರಾಮ ನಿರ್ಮಾಣ ಸಮೀಕ್ಷೆ

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಿವೃತ್ತ ಶಿಕ್ಷಕ ಶ್ರೀನಿವಾಸ ನಾಯ್ಕ ಗಂಗಾವಳಿ ಹಾಗೂ ರಾಮು ಕೆಂಚನ್ ಅವರು ಮಾತನಾಡಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕುಮಟಾ- ಹೊನ್ನಾವರ ಮಾತ್ರವಲ್ಲದೇ ಜಿಲ್ಲೆಯ ಇತರೆಡೆಗೂ ಸಮಾಜಸೇವೆಯ ಮೂಲಕ ಛಾಪು ಮೂಡಿಸುತ್ತಿದೆ. ನಾಗರಾಜ ನಾಯಕ ತೊರ್ಕೆಯವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಃಸ್ವಾರ್ಥ ಸೇವೆ ಸಲ್ಲಿಸಿ ದೀನ-ದಲಿತರಿಗೆ ಸಹಾಯಹಸ್ತ ಚಾಚುವುದರೊಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಹೃದಯಿ ಧೀಮಂತ ವ್ಯಕ್ತಿಯಾಗಿ ಬೆಳೆದು ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದಾರೆ. ಅಲ್ಲದೇ ಹಲವು ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಅವುಗಳ ಪರಿಹಾರದ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ನಾಗರಾಜ ನಾಯಕ ತೊರ್ಕೆಯವರ ಸಹೃದಯತೆಯನ್ನೂ ಅವರ ಸಾಮಾಜಿಕ ಕಳಕಳಿಯನ್ನೂ ಹೃದಯಪೂರ್ವಕವಾಗಿ ಶ್ಲಾಘಿಸಿದರು.

20180111 122641

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಹೊನ್ನಪ್ಪ ಎನ್. ನಾಯಕ ಅವರು ಮಾತನಾಡಿ ಇಂತಹ ಪ್ರತಿಭ ಪುರಸ್ಕರ ಕಾರ್ಯಕ್ರಮಗಳು ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದಾಗ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯುತ್ತದೆ ಹಾಗೂ ಇತರೇ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯುತ್ತದೆ. ಇಂತಹ ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡ ನಾಗರಾಜ ನಾಯಕ ತೊರ್ಕೆಯವರ ಕಾರ್ಯ ಅಭಿನಂದನಾರ್ಹ ಎಂದು ನುಡಿದು ತಮ್ಮ ಶಾಲೆ ಬೆಳೆದುಬಂದ ರೀತಿಯ ಕುರಿತು ವಿವರಿಸಿದರು.

RELATED ARTICLES  ಚುನಾವಣೆ ಮೊದಲು ಭರವಸೆ : ಈಗ ಗ್ರಾಮಸ್ಥರ ಗೋಳು ಕೇಳೋರೆ ಇಲ್ಲ: ಕುಮಟಾದ ಕೆಲ ಗ್ರಾಮದ ಕಥೆ ವ್ಯಥೆ..!

ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರ ಪರವಾಗಿ ಶಾಲಾ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್. ನಾಯ್ಕ, ಗಾಂವಕರ ಅವರನ್ನು, ಶಾಲಾ ಸಮಿತಿಯ ಪರವಾಗಿ ಹೊನ್ನಪ್ಪ ಎನ್. ನಾಯಕ ಅವರನ್ನೂ ಸನ್ಮಾನಿಸಿ, ಎಸ್. ಎಸ್. ಎಲ್. ಸಿ. ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಮಾರಿ ಸುಶೀಲಾ ಪಟಗಾರ, ಕುಮಾರಿ ಭವಾನಿ ವಿ. ರೇವಣಕರ ಇವರುಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ರೋಹಿದಾಸ ನಾಯ್ಕ ಗಾಂವಕರ ರವರು ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕ ವೆಂಕಟೇಶ ಪಟಗಾರ ವಂದಿಸಿದರು. ಶಿಕ್ಷಕ ರಾಜು ನಾಯಕ ಪ್ರಮಾಣಪತ್ರ ವಾಚಿಸಿದರು. ಅರುಣ ಕವರಿ, ಸಣ್ಣಪ್ಪ ಮಾರುತಿ ನಾಯಕ, ವೆಂಕಟ್ರಮಣ ಕವರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.