ಶಿರಸಿ: ಬನವಾಸಿಯಲ್ಲಿ ಫೆ.2 ಮತ್ತು 3ರಂದು ನಡೆಯುವ ಕದಂಬೋತ್ಸವದ ಪ್ರಯುಕ್ತ ಬನವಾಸಿ ಇತಿಹಾಸ, ಕಲೆ, ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರ ಸ್ಪರ್ಧೆ ಹಾಗೂ ಬನವಾಸಿ ಭಾಗದ ಅನಾನಸ್ ಕೃಷಿಗೆ ಒತ್ತು ನೀಡಲು ಅನಾನಸ್ ಮೇಳ ಸಂಘಟಿಸಲಾಗಿದೆ ಎಂದು ಸಹಾಯಕ ಆಯುಕ್ತ ರಾಜು ಮೊಗವೀರ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಜ.25ರೊಳಗೆ ಸಾಕ್ಷ್ಯಚಿತ್ರದ ಮೂರು ಪ್ರತಿಗಳನ್ನು ಉಪವಿಭಾಗಾಧಿಕಾರಿ ಕಚೇರಿಗೆ ವಿಳಾಸ ಸಹಿತ ನೀಡಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ವ್ಯವಸ್ಥಾಪಕ ರಮೇಶ ಹೆಗಡೆ (9449176409) ಸಂಪರ್ಕಿಸಬಹುದು ಎಂದರು.

RELATED ARTICLES  ಅಜ್ಜಿಯ ಮನೆಗೆ ಬಂದ ಮಗು ಕಾಲುಜಾರಿ ಹಳ್ಳಕ್ಕೆ ಬಿದ್ದು ಸಾವು: ಕುಮಟಾದಲ್ಲಿ ದುರ್ಘಟನೆ

ಕದಂಬೋತ್ಸವ ನಡೆಯುವ ಮೈದಾನದಲ್ಲಿ ಅನಾನಸ್ ಮೇಳ ನಡೆಯಲಿದೆ. ಅನಾನಸ್ ಹಣ್ಣಿನಿಂದ ತಯಾರಿಸಬಹುದಾದ ಹಲವು ಬಗೆಯ ತಿಂಡಿ, ತಿನಿಸುಗಳು, ಆಹಾರ ಪದಾರ್ಥಗಳು, ಸಂಸ್ಕರಿಸಿದ ಮತ್ತು ಸಂಸ್ಕರಿಸದೇ ಇರುವ ಆಹಾರ ಪದಾರ್ಥಗಳಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಶ ನೀಡಲಾಗುವುದು. ಅನಾನಸ್ ಬೆಳೆಯುವ ರೈತರು ಬನವಾಸಿ ಸುತ್ತಮುತ್ತಲಿನ ಸಂಸ್ಕರಣ ಘಟಕಗಳು ಮತ್ತು ಅನಾನಸ್ ಬಳಸಿ ತಿಂಡಿ ತಿನಿಸುಗಳನ್ನು ತಯಾರಿಸುವ ವ್ಯಕ್ತಿಗಳಿಗೆ ಅವಕಾಶ ನೀಡಲಾಗುವುದಲ್ಲದೇ ಉಚಿತವಾಗಿ ಸ್ಟಾಲ್‍ಗಳನ್ನೂ ನೀಡಲಾಗುವುದು ಎಂದು ತಿಳಿಸಿದರು.

RELATED ARTICLES  ಶ್ರೀಶ್ರೀ ಅವಧೂತ ಮಹರ್ಷಿಯವರಿಗೆ ಸಂದ ಗೋಕರ್ಣ ಗೌರವ

ಮೊದಲ ಬಹುಮಾನವಾಗಿ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ. ಹಾಗೂ ತೃತೀಯ 1 ಸಾವಿರ ರೂ. ಬಹುಮಾನವಾಗಿ ನೀಡಲಾಗುವುದು. ಆಸಕ್ತರು ಜ.25ರೊಳಗೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹೆಸರು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿಯ ರೇಖಾ ತಳವಾರ ಅವರನ್ನು ಸಂಪರ್ಕಿಸಬಹುದು ಎಂದರು.