ಕಾರವಾರ: ಯಲ್ಲಾಪುರ ತಾಲೂಕಿನ ಮಾವಿನಮನೆ, ವಜ್ರಳ್ಳಿಭಾಗದಲ್ಲಿ ಸಾವಿರಾರು ರೈತರು ಪಶು ಸಂಗೋಪನೆ ಮಾಡುತ್ತಿದ್ದು ಸೂಕ್ತ ಪಶು ವೈದ್ಯರ ಕೊರತೆಯಿಂದಾಗಿ ಕೃಷಿಕರಿಗೆ ಮಾರ್ಗದರ್ಶನದೊರೆಯುತ್ತಿಲ್ಲ. ಆದ್ದರಿಂದ ಕೂಡಲೇ ಅಗತ್ಯ ಸೇವೆಗಳನ್ನುಒದಗಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಜಿಲ್ಲಾಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ್ ನೇತ್ರತ್ವದಲ್ಲಿ ಶುಕ್ರವಾರ ಜಿಪಂಕಚೇರಿಗೆ ಆಗಮಿಸಿದ ಸಂಘದ ರೈತರು ವಜ್ರಳ್ಳಿ ಹಾಗೂಮಾವಿನಮನೆ ವ್ಯಾಪ್ತಿಯ ೩೦ ಕಿ.ಮೀ ಅಂತರದಲ್ಲಿ ೩ ಪಶುಆಸ್ಪತ್ರೆಗಳಿದ್ದು, ಇಲಾಖೆಯ ಗಣತಿ ಪ್ರಕಾರ ೩೮೦೦ಕ್ಕೂ ಅಧಿಕಜಾನುವಾರುಗಳಿವೆ. ಆದರೆ, ಆಸ್ಪತ್ರೆಗೆ ಯಾವದೇ ಸೌಲಭ್ಯಗಳಿಲ್ಲ. ಹೀಗಾಗಿ ಪಶು ಸಂಬಂಧಿತ ಸಮಸ್ಯೆಗಳಿಗೆ ೪೦ ಕಿ.ಮೀ. ದೂರದತಾಲೂಕು ಕೇಂದ್ರ ಯಲ್ಲಾಪುರವನ್ನು ಆಶ್ರಯಿಸಬೇಕಾಗಿದೆ ಎಂದುಅಳಲು ತೋಡಿಕೊಂಡರು.
ವಜ್ರಳ್ಳಿ ಪಶು ಆಸ್ಪತ್ರೆಯಲ್ಲಿನ ನಾಲ್ಕು ಹುದ್ದೆಗಳು ಹಾಗೂವಜ್ರಳ್ಳಿಯಲ್ಲಿ ಎರಡು ಹುದ್ದೆಗಳು ಖಾಲಿ ಇರುವದರಿಂದ ರೈತರಿಗೆತೀವೃ ಸಮಸ್ಯೆಯಾಗುತ್ತಿದೆ. ಕೃತಕ ಗರ್ಭದಾರಣೆ, ಜಂತು ನಿವಾರಕಲಸಿಕೆಗಳು ದೊರೆಯುತ್ತಿಲ್ಲ. ಪ್ರಥಮ ಚಿಕಿತ್ಸೆಗೂ ಪರದಾಡಬೇಕಾಗಿಬಂದಿದೆ . ಸ್ಥಳೀಯ ಹಾಲು ಉತ್ಪಾದಕ ಸಂಘಗಳೊಡನೆ ಚರ್ಚೆನಡೆಸಿ ಈ ಮನವಿ ಸಲ್ಲಿಸಲಾಗುತ್ತಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ ಪ್ರತಿಕ್ರಿಯಿಸಿಸಿಬ್ಬಂದಿ ಕೊರತೆ ಬಗೆ ಹರಿಸಲು ಸರ್ಕಾರ ಎಲ್ಲಾ ರೀತಿಯಲ್ಲಿಯೂಪ್ರಯತ್ನ ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ಅಗತ್ಯ ಸೇವೆಒದಗಿಸಲು ೬೦ಕ್ಕೂ ಅಧಿಕ ಪಶು ವೈದ್ಯರ ನೇಮಕಮಾಡಲಾಗುತ್ತದೆ. ಅದರಲ್ಲಿ ವಜ್ರಳ್ಳಿ ಹಾಗೂ ಮಾವಿನ ಮನೆಪಂಚಾಯತ ವ್ಯಾಪ್ತಿಗೂ ಆದ್ಯತೆ ನೀಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಿಸಾನ್ ಸಂಘದ ಪದಾಧಿಕಾರಿಗಳಾದ ಪ್ರಸನ್ನಗಾಂವ್ಕರ್, ವಿಘ್ನೇಶ್ವರ ನಾರಾಯಣ ಭಟ್ಟ, ವಿನಾಯಕ ಹೆಗಡೆ,ಬೈರವೇಶ್ವರ ಭಟ್ಟ ಇತರರಿದ್ದರು.