ಭಟ್ಕಳ – ತಾಲೂಕ ಅರಣ್ಯ ಇಲಾಖೆಯು ಒಂದಿಲ್ಲೊಂದು ಸಮಸ್ಯೆಯನ್ನು ತಂದುಕೊಂಡು ಸಾರ್ವಜನಿಕವಾಗಿ ಅವಮಾನಕ್ಕೆ ಈಡಾಗುವುದು ಮಾಮುಲು ಆಗಿ ಹೋಗಿದೆ . ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮದ ಗೊರ್ಟೇ ಪೋರೆಸ್ಟ ಕ್ವಾಟ್ರ ಸ್ ಗೆ ಅರಣ್ಯ ಸಿಬ್ಬಂದಿಯೋರ್ವನು ಯುವತಿಯನ್ನು ಕರೆತಂದು ಸಾರ್ವಜನಿಕರೆದುರು ಸಿಕ್ಕಿಬಿದ್ದು ಮಾನವನ್ನು ಕಳೆದುಕೊಂದ ಘಟನೆ ನಡೆದಿದೆ .

ಈ ಬಗ್ಗೆ ಸಾರ್ವಜನಿಕರು ಇಂತಹ ಅಧಿಕಾರಿಗಳಿಂದ ನಮ್ಮ ಊರಿಗೆ ಕೆಟ್ಟ ಹೆಸರು ಬರುತ್ತಿದ್ದು ಇಂತಹ ಅಧಿಕಾರಿಗಳ ವಿರುದ್ದ ಕ್ರಮವನ್ನು ಕೈಗೋಳ್ಳ ಬೇಕು ಎಂದು ಸಹಾಯಕ ಅರಣ್ಯಾದಿಕಾರಿಗಳ ಮುಂದೆ ಪಟ್ಟುಹಿಡಿದರು ಆದರೆ ಸಹಾಯಕ ಅರಣ್ಯಾಧಿಕಾರಿಗಳು ಆ ಯುವತಿ ಹಾಗು ಅರಣ್ಯ ಸಿಬ್ಬಂದಿಗೆ ಮದುವೆ ನಿಶ್ಚಯವಾಗಿದ್ದು ಯುವತಿಯನ್ನು ಕರೆತಂದಿರುದರಲ್ಲಿ ಯಾವುದೆ ತಪ್ಪಿಲ್ಲಾ ಎಂದು ವಾದಿಸಿದ್ದಾರೆ ಎನ್ನಲಾಗಿದೆ.

RELATED ARTICLES  ವೈನ್ ಶಾಪ್ ಹಾಗೂ ಬಾರ್‌ಗಳನ್ನ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ .

ಇಲ್ಲಿ ಸಾರ್ವಜನಿಕರ ಪ್ರಶ್ನೆ ಎಂದರೆ ಒಂದು ವೇಳೆ ಆ ಯುವತಿಯೊಂದಿಗೆ ಮದುವೆ ನಿಶ್ವಯವಾಗಿರುವುದೆ ಹೌದಾದರೆ ಆ ಸಿಬ್ಬಂದಿಯು ಸಂಜೆಯ ಸಮಯದಲ್ಲಿ ಆ ಯುವತಿಯನ್ನು ಓಬ್ಬಂಟಿಯಾಗಿ ಕರೆತರುವ ಉದ್ದೇಶವೇನು ? ಒಂದು ವೇಳೆ ಆ ಯುವತಿಯ ತೆಜೋವದೆ ಚಾರಿತ್ರ್ಯಕ್ಕೆ ದಕ್ಕೆಬರುವಂತ ಕೆಲಸಗಳು ಅಲ್ಲಿ ನಡೆದರೆ ಅದಕ್ಕೆ ಯಾರು ಜವಾಬ್ದಾರರು? ಜವಾಬ್ದಾರಿಯುತ ಅಧಿಕಾರಿಗೇ ಈ ರೀತಿಯ ನಡವಳಿಕೆಯನ್ನು ಪ್ರದರ್ಶಿದರೆ ಇನ್ನು ಸಾಮಾನ್ಯ ಜನರ ಪಾಡೆನು ಎಂಬುದಾಗಿದೆ?

ಭಟ್ಕಳ ಗ್ರಾಮಿಣ ಠಾಣೆಯ ಪೋಲಿಸರು ಯುವತಿಯನ್ನು ವಿಚಾರಿಸುವುದಾಗಿ ಠಾಣೆಗೆ ಕರೆದೊಯ್ದಿರುತ್ತಾರೆ ಇಲ್ಲಿ ಇನ್ನೊಂದು ಸೋಜಿಗದ ಸಂಗತಿಯೆಂದರೆ ಯುವತಿಯನ್ನು ಕರೆತಂದ ಅರಣ್ಯ ಸಿಬ್ಬಂದಿಯನ್ನು ಬಿಟ್ಟು ಕೆವಲ ಯುವತಿಯನ್ನು ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ಒಟ್ಟಾರೆ ಹೇಳ ಬೇಕೆಂದರೆ ಅರಣ್ಯ ಇಲಾಖೆಯ ಸಿಬ್ಬಂದಿ ವರ್ತನೆಯೊಂದಾಗಿ ಇಲಾಖೆಗೆ ಕಪ್ಪುಚುಕ್ಕೆ ಬಂದಿದ್ದಂತೂ ಸುಳ್ಳಲ್ಲ.’

RELATED ARTICLES  ಮಳೆನೀರು ಕೊಯ್ಲು ಮುಖಾಂತರ ಅಂತರ್ಜಲ ಹೆಚ್ಚಿಸಿ-ಸೀತಾರಾಮ ಶೆಟ್ಟಿ ಬಾರ್ಕೂರು

ಇನ್ನು ಮುಂದಾದರು ಇದಕ್ಕೆ ಸಂಬಂದಿಸಿದ ಮೆಲಾಧಿಕಾರಿಗಳು ಅರಣ್ಯ ಇಲಾಖೆಯ ಈ ಉದ್ದಟತನಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಾರೊ ಎಂದು ಕಾದು ನೋಡಬೇಕಾಗಿದೆ. ಇದಕ್ಕೂ ಮೊದಲು ಬೀಟ್ ಪೋರೆಸ್ಟ ಒಬ್ಬ ವರದಿಗೆ ಹೋದ ಪತ್ರಕರ್ತರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೆ ಪತ್ರಕರ್ತರನ್ನು ಕಛೇರಿಯ ಭಾಗಿಲನ್ನು ಹಾಕಿ ಬಂದಿಸುವ ಮೂರ್ಖತನಕ್ಕೆ ಇಳಿದಿದ್ದರು ಕೋನೆಗೆ ಅಂದಿನ ಸಹಾಯಕ ಅರಣ್ಯಾದಿಕಾರಿಗಗಳು ಪತ್ರಕರ್ತರಲ್ಲಿ ಕ್ಷಮೆ ಕೇಳಿದ ಘಟನೆ ನಡೆದಿತ್ತು.