ಕುಮಟಾ : ಬಹು ವಿಶಿಷ್ಟ ಹಾಗೂ ಪಾರಂಪರಿಕ ವೈಶಿಷ್ಟ್ಯತೆಯನ್ನು ಹೊಂದಿರುವ ಕುಮಟಾ ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾಂಬಾ ದೇವರ ರಥೊತ್ಸವ ಇಂದು ಸಂಪನ್ನವಾಯಿತು.
ಬೆಳಗ್ಗಿನಿಂದ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಶ್ರೀ ದೇವರನ್ನು ರಥಾರೂಢವಾಗಿಸಿ ರಥವನ್ನು ಎಳೆಯುವ ಮೂಲಕ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು.
ಪ್ರತೀವರ್ಷ ನಡೆಯುವ ಜಾತ್ರೆ ಕೇವಲ ಸುತ್ತಮುತ್ತಲ ಜನರನ್ನಷ್ಟೇ ಅಲ್ಲದೇ ಎಲ್ಲ ಸಮಾಜದ ಹಾಗೂ ರಾಜ್ಯ ಹಾಗೂ ಇತರ ರಾಜ್ಯದ ಜನರನ್ನು ಆಕರ್ಷಿಸುವುದು.
ಹೆಗಡೆಯ ಸುತ್ತಮುತ್ತಲಿನ ಹಳಗೆರೆ ಹಾಗೂ ಇನ್ನಿತರ ಪ್ರದೇಶ ಹಾಗೂ ಸಾರಿಂಗಬೀರ, ಹೊಲಿಯಾಡ ಹೊನ್ನಪ್ಪ ದುರ್ಗಾದೇವಿ ದೇವಾಲಯದಿಂದ ಬರುವ ಕಲಶಗಳು ಜನಾಕರ್ಷಣೆಯ ಕೇಂದ್ರಬಿಂದುಗಳಾಗಿದ್ದವು.
ತೇರಿಗೆ ಬಾಳೇಹಣ್ಣು ಎಸೆಯುವ ಮೂಲಕ ಜನರು ಹರಕೆ ತೀರಿಸಿದರೆ ತಾಯಿ ಶಾಂತಿಕಾಂಬೆಗೆ ವಿಶೇಷ ಪೂಜೆ ಹಾಗೂ ಇನ್ನಿತರೆ ಸೇವೆ ಹರಕೆಗಳು ಸಂದವು.