ಹೊನ್ನಾವರ: ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟನ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ನೂರಾಐವತ್ತಾರನೆ ಜಯಂತಿಯನ್ನು ಮಂಕಿಯ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.
ವಿವೇಕಾನಂದರ ಆದರ್ಶಗಳನ್ನು ವಿಧ್ಯಾರ್ಥಿಗಳಲ್ಲಿ ಪ್ರಚುರಪಡಿಸಲು ವಿವೇಕಾನಂದರ ಕುರಿತಂತೆ ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಗೋವಿಂದ ನಾಯ್ಕ ಮಾತನಾಡಿ ವಿವೇಕಾನಂದರು ಭಾರತದ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸಿದ್ದರು, ಹಾಗೆ ಇಂದಿನ ವಿಧ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ನಡೆಯಬೇಕೆಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದ ಅಣ್ಣಪ್ಪ ನಾಯ್ಕ್ ಇವರು ಟ್ರಸ್ಟ್ ಒಳ್ಳೆಯ ಉದ್ದೇಶದ ಜೊತೆಯಲ್ಲಿ ಒಳ್ಳೆಯ ಕಾರ್ಯಕ್ರಮವನ್ನು ಮಾಡುತ್ತಿದ್ದು.ಒಳ್ಳೆಯತನಕ್ಕೆ ತನ್ನ ಬೆಂಬಲ ಯಾವಾಗಲೂ ಇದೆ..ನನ್ನ ಸಹಕಾರ ಬೇಕಾಗಿದ್ದದಲ್ಲಿ ತಾನು ಸಹಕರಿಸಲು ಸಿದ್ದ ಎನ್ನುವ ಭರವಸೆ ನೀಡಿದರು.

RELATED ARTICLES  ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಅಥಿತಿಗಳಾಗಿ ಮಾತನಾಡಿದ ವಿದ್ಯಾ ನಾಯ್ಕ್ ಇವರು ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸುವುದರ ಜೊತೆಯಲ್ಲಿ ಜನಸೇವೆಗಾಗಿ ವಿವೇಕಾನಂದರು ಯುವಕರಿಗೆ ಕರೆಕೊಟ್ಟಂತೆ ಸೇವೆಯ ದೃಷ್ಟಿಯಲ್ಲಿ ಯುವಕರು
ಟ್ರಸ್ಟ್ ನ್ನು ಕಟ್ಟಿದ್ದಾರೆ.ಅದು ಉತ್ತಮವಾಗಿ ಸಾಗಿ ಇನ್ನು ಅನೇಕ ಕಾರ್ಯಕ್ರಮ ನಡೆಸುವಂತಾಗಿ ಎಂದು ಹಾರೈಸಿದರು. ಕೊನೆಯಲ್ಲಿ ಕಾರ್ಯಕ್ರಮದ ಆಯೋಜಕರಾದ ರಾಮಕ್ಷತ್ರಿಯ ವೆಲ್ ಫೆರ್ ಟ್ರಸ್ಟಿನ ಕಾರ್ಯದರ್ಶಿ ಸಚಿನ ಹಳದಿಪುರ ಅವರು ವಿವೇಕಾನಂದರ ಜೀವನ ಚರಿತ್ರೆಯನ್ನು ಪುಟ್ಟದಾಗಿ ಹೇಳಿ ಅವರ ಮಾತಿನಂತೆ ಅವರ ಆದರ್ಶಗಳನ್ನು ಪಾಲಿಸಲು ಟ್ರಸ್ಟ್ ನ್ನು ಸ್ಥಾಪನೆ ಮಾಡಿ ಅದರ ಮೂಲಕ ಸೇವಾ ಕಾರ್ಯಗಳನ್ನು ಮಾಡುತ್ತಿರುವುದಾಗಿ ಹೇಳಿ, ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡಿಕೊಟ್ಟ ಪ್ರೌಢ ಶಾಲಾ ಸಿಬ್ಬಂದಿ ಹಾಗೂ ಮುಖ್ಯೋದ್ಯಾಪಕರಿಗೆ ಧನ್ಯವಾದ ಸಲ್ಲಿಸಿದರು,ಈ ಕಾರ್ಯಕ್ರಮಕ್ಕೆ ಟ್ರಸ್ಟಿಗಳಾದ ಹರೀಶ್ ಮಂಕಿ ಮತ್ತು ಹರೀಶ್ ನಾಯ್ಕ್ ಹಾಜರಿ ಇದ್ದು ಕಾರ್ಯಕ್ರಮವನ್ನು ಚಂದಾಗಾಣಿಸಲು ಸಹಕರಿಸಿದರು.

RELATED ARTICLES  ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಲಸಿಕಾ ಅಭಿಯಾನ

ನಂತರ ಕಾರ್ಯಕ್ರಮದಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ಪಾರಿತೋಷಕದ ಜೊತೆ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿವಿತರಿಸಿ.ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.