ಭಟ್ಕಳ – ತಾಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ನೌಕರರ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ಜಾಲಿ ರೋಡ್ ಕೋಲಾ ಮೈದಾನದಲ್ಲಿ ನೆರವೇರಿತು.

ಕ್ರೀಡಾ ಮನೋಭಾವ ಮೂಡಿಸುವ ಈ ಅದ್ದೂರಿ ಕಾರ್ಯಕ್ರಮಕ್ಕೆ , ಸ್ವತಃ ಕ್ರೀಡಾಪಟುವಾಗಿ, ಸದಾ ಸಮಾಜಮುಖಿ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ *ಬಿಜೆಪಿ ಉ.ಕ ಜಿಲ್ಲಾ ಯುವಮೋರ್ಚ ಪ್ರಧಾನಕಾರ್ಯದರ್ಶಿಯಾದ ಯುವನಾಯಕ ಸುನೀಲ ನಾಯ್ಕರು ಉದ್ಘಾಟನೆ ನೆರೆವೆರಿಸಿದರು, ವಿ ಎನ್ ಬಾಡಕರ್ ತಹಸಿಲ್ದಾರು‌ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

RELATED ARTICLES  ರಾಜ್ಯಮಟ್ಟಕ್ಕೆ ಆಯ್ಕೆಯಾದ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.

ಸುನೀಲ ನಾಯ್ಕರು ಮಾತನಾಡಿ ಇವತ್ತಿನ ಪರಿಸ್ಥಿತಿಯಲ್ಲಿ ನೌಕರರಿಗೆ ಬಿಡುವಿಲ್ಲದ ಸಮಯದಲ್ಲು ಸಹ *ಕ್ರೀಡೆಯ ಮಹತ್ವತೆಗಾಗಿ ಬಿಡುವು ಮಾಡಿಕೊಂಡು ಅತ್ಯಂತ ವ್ಯವಸ್ಥಿತವಾಗಿ ಕ್ರೀಡಾ ಯೋಜನೆ ಮಾಡಿರುವದು ಶ್ಲಾಘನೀಯ ಎಂದರು.

ಯುವ ಪೀಳಿಗೆಗೆ ಹಾಗೆ ಮುಂದಿನ‌ ಭವಿಷ್ಯದ ದೃಷ್ಟಿಯಿಂದ ನೌಕರರ ಮಾರ್ಗದರ್ಶನ ಅಮೂಲ್ಯವಾದುದು, ಮುಂದಿನ ದಿನಗಳಲ್ಲಿ ಸಮಾಜದ ಒಳಿತಿಗೆ ಬಹುಮುಖ್ಯ ಪಾತ್ರ ವಹಿಸುವ ನೌಕರರು ಕ್ರೀಡೆಗಳ ಜೊತೆಗೆ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಇನ್ನಿತರ ಸಮಾಜ ಮುಖಿ ಕಾರ್ಯಕ್ರಮವನ್ನು ನಡೆಸಿಕೊಂಡು
ಬರಬೇಕೆಂದು ನೆರೆದಿದ್ದ ನೌಕರರ,ಕ್ರೀಡಾ ಅಭಿಮಾನಿ ಸಮ್ಮುಖದಲ್ಲಿ ಹೇಳಿದರು.

RELATED ARTICLES  ಮಹಾಬಲೇಶ್ವರ ದೇವಾಲಯಕ್ಕೆ ಭಾರತೀಯ ಚುನಾವಣಾ ಆಯುಕ್ತರ ಭೇಟಿ

ಈ ಸಂದರ್ಭದಲ್ಲಿ ವೆಂಕಟೇಶ ನಾಯ್ಕ, ಮೋಹನ ನಾಯ್ಕ, ವಾಸು ಮೋಗೆರ, ಶೇಕರ್ ಪೂಜಾರಿ, ವಿನಾಯಕ ಥಾಮ್ಸನ್, ರಾಮ ಪೂಜಾರಿ ಹಾಗೂ ಅನೇಕ ನೌಕರ ವೃಂದದವರು ಉಪಸ್ಥಿತರಿದ್ದರು. ಸಿ,ಡಿ ಪಡುಕೋಣೆ ನಿರೂಪಣೆ ಹಾಗೂ ಗಣೇಶ ಹೆಗಡೆ ವಂದನಾರ್ಪಣೆ ನಡೆಸಿಕೊಟ್ಟರು.