ಭಟ್ಕಳ : ತಾಲೂಕಿನ ತೆಂಗಿನಗುಂಡಿಯಲ್ಲಿ ಇಂದು ತಿಲಕ ಯುವಕ ಮಂಡಳ ಹಾಗೂ ಸಿಂಚನ ಯುವತಿ ಮಂಡಳದ ನೂತನ ಕಟ್ಟಡದ ಉದ್ಘಾಟನೆ ನಡೆಯಿತು. ನೂತನ ಕಟ್ಟಡದ ಉದ್ಘಾಟನೆಯನ್ನು ಶಾಸಕ ಮಂಕಾಳ ವೈದ್ಯ ನೆರವೇರಿಸಿದರು. ಊರಿನ ಯುವಕ ಮಂಡಳದ ವತಿಯಿಂದ ಶಾಸಕ ಮಂಕಾಳ ವೈದ್ಯ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜಯಶ್ರೀ ಮೊಗೇರ ಅವರನ್ನು ಸನ್ಮಾನ ಮಾಡಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಂಕಾಳ ವೈದ್ಯರವರು ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಹೆಚ್ಚು ಕಡಿಮೆ ಸುಮಾರು 150 ಕೋಟಿ ರೂಪಾಯಿಯನ್ನು ಮಂಜೂರಿ ಮಾಡಿದ್ದೇನೆ. ಅದರಲ್ಲಿ 90% ತೆಂಗಿನಗುಂಡಿಗೆ ಹಾಕಲಾಗಿದೆ. ಇದಕ್ಕೆ ಕಾರಣ ಈ ಊರಿನ ಮುಖಂಡರು ಯುವಕರು ನನಗೆ ಒತ್ತಡ ತಂದು ಕೆಲಸ ಮಾಡಿಸಿಕೊಂಡಿದ್ದಾರೆ. ಇಷ್ಟೆಲ್ಲ ಕೆಲಸ ಆಗಲು ಊರಿನ ಮುಖಂಡರ ಹಾಗೂ ಯುಕರ ಪರಿಶೃಮ ತುಂಬಾ. ಅವರು ಬೆಳಿಗ್ಗೆ ಮದ್ಯಾಹ್ನವೆನ್ನದೇ ನನ್ನ ಬಳಿಗೆ ಬಂದು ಇಷ್ಟೆಲ್ಲ ಕೆಲಸ ಆಗುವಂತೆ ಮಾಡಿಸಿಕೊಂಡಿದ್ದಾರೆ. ನಿಮ್ಮೂರಿನ ಅಭವೃದ್ದಿಗೆ ನಿಮ್ಮ ಪರಿಶ್ರಮವೇ ಕಾರಣವಾಗಿದೆ. ನಿಮ್ಮಲ್ಲಿ ನಿಮ್ಮ ಸಮಾಜಕ್ಕೆ ಊರಿಗೆ ಮುಂದಿನ ಪೀಳಿಗೆಗೆ ಏನಾದರೂ ಮಾಡಬೇಕೆಂಬ ಕನಸಿದೆ ಎಂದರು.

RELATED ARTICLES  ಭಟ್ಕಳ ಮೂಲದ ವ್ಯಕ್ತಿಗೆ ಕೊರೋನಾ ಫಾಸಿಟಿವ್..!

ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಮೊಗೇರ ಮಾತನಾಡಿ ನನ್ನ ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟು ನಾನು ಮಾಡಿದ್ದೇನೆ. ಶಾಸಕರು ಕೂಡ ನಮಗೆ ಸಹಕಾರ ಮಾಡಿದ್ದಾರೆ. ಇಲ್ಲಿನ ಪ್ರೌಢ ಶಾಲೆಗೆ ಜಾಗ ಕೂಡ ಮಂಜೂರಿ ಮಾಡಿದ್ದಾರೆ ಎಂದರು.

RELATED ARTICLES  ಅರಬೈಲ್ ಘಟ್ಟದಲ್ಲಿ ಎರಡು ಲಾರಿಗಳ ಮಧ್ಯೆ ಅಪಘಾತ

S1550060

ಈ ಸಂದರ್ಭದಲ್ಲಿ ಕೇಶವ ಮೊಗೇರ, ನಾರಾಯಣ ಮೊಗೇರ, ಸೊಮನಾಥ ಮೊಗೆರ, ಪಾರ್ವತಿ ಮೊಗೇರ ವಿಠ್ಠಲ ನಾಯ್ಕ, ಕೆ.ಎಂ ಕರ್ಕಿ, ಶಂಕರ ಹೆಬಳೆ ಉಪಸ್ಥಿತರಿದ್ದರು.