ಹಾವೇರಿ : ಬೈಕ್‌ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ವಾಹಿನಿ ವರದಿಗಾರ ಸಾವನ್ನಪ್ಪಿದ್ದಾರೆ. ಮೌನೇಶ ಪೋತರಾಜ್ (27) ಮೃತಪಟ್ಟವರು.

ಖಾಸಗಿ ವಾಹಿನಿಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಮೌನೇಶ, ಶಿರಸಿಯಿಂದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಪರಿಶೀಲನೆ ನಡೆಸಿ, ಶವವನ್ನು ಪುರಸಭೆಯ ಕಸ ಸಾಗಿಸುವ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮಾನವೀಯತೆಯನ್ನೇ ಮರೆತುಬಿಟ್ಟಿದ್ದರು.

RELATED ARTICLES  ಘರ್ ಘರ್ ಭಜನ್ ನೂರನೆಯ ಕಾರ್ಯಕ್ರಮ : ಉತ್ತರಕನ್ನಡ ದಿಂದ ಅತಿಥಿಯಾಗಿ ಭಾಗವಹಿಸಿದ ಚಿದಾನಂದ ಭಂಡಾರಿ

ವಿಚಿತ್ರ ಎಂದರೆ ವಾಹನದಲ್ಲಿ ಕಸದ ರಾಶಿಯಿತ್ತು. ಕಸ ತುಂಬುವ ಬುಟ್ಟಿ, ಸಲಿಕೆಗಳು ಇದ್ದವು. ಅಂತಹ ವಾಹನದಲ್ಲೇ ಪೊಲೀಸರು ಮೃತದೇಹ ಸಾಗಿಸಿ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತ ಕೆಲಸ ಮಾಡಿದ್ದರು.

RELATED ARTICLES  ಆಕ್ಸಿಜನ್ ಸಿಲಿಂಡರ್ ತುಂಬಿದ್ದ ಮಿನಿ ಲಾರಿ ಪಲ್ಟಿ

ಕಸ ತುಂಬುವ ವಾಹನದಲ್ಲಿ ಪತ್ರಕರ್ತನ ಮೃತದೇಹ ಸಾಗಿಸಿದ್ದನ್ನು ಕಂಡು, ಸ್ಥಳೀಯರು ಪೊಲೀಸ್ ಇಲಾಖೆ ಮತ್ತು ಪುರಸಭೆ ವಿರುದ್ಧ ಹಿಡಿಶಾಪ ಹಾಕಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶವ ಸಾಗಿಸಲು ಯಾವುದೇ ವಾಹನ ಸಿಗದೆ ಇರುವುದರಿಂದ ಈ ರೀತಿ ಮಾಡಲಾಗಿದೆ ಎಂದು ಸಬೂಬು ನೀಡಿದ್ದಾರೆ.