ಯಲ್ಲಾಪುರ: ಜ.26 ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುವ ಕುರಿತು ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.

ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಕಾಳಮ್ಮನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಬೆಳಿಗ್ಗೆ 9 ಗಂಟೆಗೆ ದ್ವಜಾರೋಹಣ ಪಥ ಸಂಚಲನ ನಡೆಸುವುದು, ಪ್ರಧಾನ ವೇದಿಕೆಯ ಪಕ್ಕ ಗಣ್ಯರು, ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಲಾಯಿತು.

RELATED ARTICLES  ಬಾಡ ಶ್ರೀ ಕಾಂಚಿಕಾ ದೇವಸ್ಥಾನದ ಕೆರೆಗೆ ಬೇಕಿದೆ ಮರುಜೀವ

ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಶಿರೀಷ್ ಪ್ರಭು,ಮುಖ್ಯಾಧಿಕಾರಿ ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪಾ ನಾಯ್ಕ, ಸದಸ್ಯರಾದ ರೇಣುಕಾ ನಲವಡಿ,ವಂದನಾ ಭಟ್ಟ, ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ,ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಭಾರತ ಸೇವಾದಳದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ,ಯುವಜನ ಸೇವಾ ಕ್ರೀಡಾಧಿಕಾರಿ ನಾರಾಯಣ ನಾಯಕ, ಬಿ.ಆರ್.ಸಿ. ಸಂಯೋಜನಾಧಿಕಾರಿ ಶ್ರೀರಾಮ ಹೆಗಡೆ,ಬೋವಿ ಯುವ ವೇದಿಕೆ ಜಿಲ್ಲಾಕಾರ್ಯಾಧ್ಯಕ್ಷ ನಾಗೇಶ್ ಬೋವಿವಡ್ಡರ್, ಮುಂತಾದ ವಿವಿಧ ಸಂಘ-ಸಂಸ್ಥೆಯ ಪ್ರಮುಖರು, ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

RELATED ARTICLES  ಜೀವ ಉಳಿಸಲು ಮುಂದಾದ ಲೈಫ್ ಗಾರ್ಡಗಳ ಮೇಲೆಯೇ ಹಲ್ಲೆ.