ಶಬರಿಮಲೆ: ಪ್ರತಿ ವರ್ಷದಂತೆ ಈ ಬಾರಿಯೂ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನ ಪಡೆದ ಅಯ್ಯಪ್ಪ ಸ್ವಾಮಿ ಭಕ್ತರು ಪುನೀತರಾದರು.

ಸಂಕ್ರಮಣ ದಿನವಾದ ಇಂದು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಮೂರು ಬಾರಿ ಮಕರ ಜ್ಯೋತಿ ಕಾಣಿಸಿಕೊಂಡಿತ್ತು. ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಜ್ಯೋತಿಯನ್ನು ಕಣ್ತುಂಬಿಕೊಂಡರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 17-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಯಾವುದೇ ಬೇದಭಾವವಿಲ್ಲದೆ ಕಡು ಬಡವರಿಂದ ಶ್ರೀಮಂತರವರೆಗೂ ಪ್ರತಿ ವರ್ಷವೂ ಶಬರಿಮಲೆಗೆ ಭಕ್ತಾದಿಗಳಾಗಿ ಆಗಮಿಸಿ ಅಯ್ಯಪ್ಪ ಸ್ವಾಮಿ ಹಾಗೂ ಜ್ಯೋತಿಯ ದರ್ಶನ ಪಡೆದು ಪುನೀತರಾಗುವರು.

ಲಕ್ಷಾಂತರ ಭಕ್ತರು ಮಕರ ಜ್ಯೋತಿಯಂದು ಶಬರಿಮಲೆಗೆ ಆಗಮಿಸುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಬಂದೋಬಸ್ತ್ ಹಾಗೂ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಶಬರಿಮಲೆಗೆ ಕೇವಲ ದಕ್ಷಿಣ ಭಾರತ ರಾಜ್ಯಗಳಿಂದಷ್ಟೇ ಅಲ್ಲದೆ ಉತ್ತರ ಭಾರತದ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ.

RELATED ARTICLES  ಕಾಲ್ತುಳಿತಕ್ಕೆ ಬಲಿಯಾದರು ಕರಾವಳಿ ಜನರು!