ಕಾರವಾರ: ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಇಂದು (ಜ.15) ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಗೊಂಡರು.

ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಮುಖಂಡ ಮಧು ಬಂಗಾರಪ್ಪ ನೇತೃತ್ವದಲ್ಲಿ ಅವರು ಜೆಡಿಎಸ್ ಸೇರ್ಪಡೆಯಾದರು.

RELATED ARTICLES  ಸಂಸ್ಕೃತ ಭಾಷೆಯ ಶಬ್ದ ಭಂಡಾರವನ್ನು ಯಾವ ಭಾಷೆಯ ಶಬ್ದ ಭಂಡಾರವೂ  ಸರಿಗಟ್ಟಲು ಸಾಧ್ಯವಿಲ್ಲ : ಶಂಕರ ಭಟ್ಟ

2013ರ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ಆನಂದ ಅಸ್ನೋಟಿಕರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 44,847 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.

ನಂತರ ರಾಜಕೀಯದಿಂದ ದೂರವಾಗಿದ್ದ ಅವರು, ನಂತರ ಉದ್ಯಮದತ್ತ ವಾಲಿದ್ದರು. ಬಿಜೆಪಿಯ ಚಟುವಟಿಕೆಗಳಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ.

RELATED ARTICLES  ಜಿಲ್ಲೆಯ ಅನೇಕ ದೇವಾಲಯಗಳು‌ ಮಾಹಿತಿ ಹಕ್ಕಿನಡಿ : ಇನ್ನು ಅನಗತ್ಯ ಕಾರಣ ನೀಡಿ ಸಾರ್ವಜನಿಕರ ಅರ್ಜಿ ತಿರಸ್ಕರಿಸುವಂತಿಲ್ಲ

ಇದೀಗ ಜೆಡಿಎಸ್ ಕುಟುಂಬ ಸೇರಿದ ಅವರು ಕಾರವಾರ ಕ್ಷೇತ್ರದ ಬಹು ನಿರೀಕ್ಷಿತ ಅಭ್ಯರ್ಥಿಯಾಗಿದ್ದಾರೆ.