ಹೊಸದಿಲ್ಲಿ : ಮುಖದ ಬಿಂಬ ಆಧಾರಿತ ಆಧಾರ್‌ ದೃಢೀಕರಣ ಕ್ರಮವನ್ನು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಪ್ರಕಟಿಸಿದೆ. ಆಧಾರ್‌ ಮಾಹಿತಿಗಳಿಗೆ ಹೊರಗಿನವರು ಕನ್ನ ಹಾಕುವುದನ್ನು ತಪ್ಪಿಸಲು ಈ ಹೆಚ್ಚುವರಿ ಭದ್ರತಾ ಸ್ತರವನ್ನು ಅಳವಡಿಸಲಾಗಿದೆ ಎಂದು ಅದು ತಿಳಿಸಿದೆ.

ಆಧಾರ್‌ ಬಳಕೆದಾರರ ಈ ಹೊಸ ಗುರುತು ದೃಢೀಕರಣ ಕ್ರಮ ಇದೇ ವರ್ಷ ಜುಲೈ 1ರಿಂದ ಜಾರಿಗೆ ಬರುವುದೆಂದು ಯುಐಡಿಎಐ ಸಿಇಓ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

RELATED ARTICLES  ಬಿ.ಎಸ್‌ ಯಡಿಯೂರಪ್ಪ ನಾಳೆ ಮುಖ್ಯಮಂತ್ರಿಯಾಗ್ತಾರೆ!

ಈ ಹೊಸ ಕ್ರಮದಿಂದಾಗಿ ಕೈಬೆರಳ ಅಚ್ಚಿನ ಮೂಲಕ ಗುರುತು ದೃಢೀಕರಿಸುವಲ್ಲಿ ಹಿರಿಯ ವಯಸ್ಸಿನವರು ಅನುಭವಿಸುವ ತೊಂದರೆಗಳಿಗೆ ತೆರೆ ಬೀಳಲಿದೆ ಎಂದವರು ಹೇಳಿದ್ದಾರೆ.

ಪ್ರಕೃತ ಆಧಾರ್‌ ಬಳಕೆದಾರರ ಗುರುತು ದೃಢೀಕರಣಕ್ಕೆ ಕೈ ಬೆರಳ ಅಚ್ಚು ಅಥವಾ ಕಣ್ಣಿನ ಬೊಂಬೆಯನ್ನು ಅಥವಾ ಓಟಿಪಿಯನ್ನು ಬಳಸಲಾಗುತ್ತಿದೆ. ಇನ್ನು ಮುಂದೆ ಮುಖದ ಬಿಂಬವು ಸುಲಭದ ಗುರುತು ದೃಢೀಕರಣ ಕ್ರಮವಾಗಲಿದೆ ಎಂದು ಯುಐಡಿಎಐ ಹೇಳಿದೆ.

RELATED ARTICLES  ಸಬ್ ಕಾ ವಿಶ್ವಾಸ್…. ಸಬ್ ಕಾ ವಿಕಾಸ್ … ಸರ್ವರ ಹಿತಕ್ಕೆ….ಯೋಗ್ಯ ಯೋಗ .

ಕಳೆದ ವಾರವಷ್ಟೇ ಯುಐಡಿಎಐ, ಆಧಾರ್‌ ಬಳಕೆದಾರರು ತಮ್ಮ 13 ಅಂಕಿಗಳ ಆಧಾರ್‌ ಕಾರ್ಡ್‌ ಬಳಸುವುದನ್ನು ತಪ್ಪಿಸಲು ಅದರ ಛಾಯಾ ಕಾರ್ಡನ್ನು (ವರ್ಚುವಲ್‌ ರಿಯಾಲಿಟಿ) ವೆಬ್‌ಸೈಟ್‌ ಮೂಲಕವೇ ಪಡೆದುಕೊಳ್ಳುವ ವಿಶಿಷ್ಟ ಭದ್ರತಾ ಕ್ರಮವನ್ನು ಪ್ರಕಟಿಸಿತ್ತು.

ಬಳಕೆದಾರರು ಒಂದು ಬಾರಿ ಪಡೆದುಕೊಳ್ಳುವ ವರ್ಚುವಲ್‌ ರಿಯಾಲಿಟಿ ಕಾರ್ಡ್‌ ಅನಂತರದಲ್ಲಿ ಇನ್ನೊಂದು ಬಾರಿ ಪಡೆದುಕೊಳ್ಳುವ ವರೆಗೂ ಮೊದಲನೇಯದು ಊರ್ಜಿತದಲ್ಲಿರುತ್ತದೆ ಎಂದು ಯುಐಡಿಎಐ ಹೇಳಿತ್ತು.