ಭಟ್ಕಳ: ಇಲ್ಲಿನ ಶಿರಾಲಿಯ ಸಿದ್ಧಾರ್ಥ ಪದವಿ ಮಹಾವಿದ್ಯಾಲಯ ಇದರ ಕರ್ನಾಟಕ ವಿಶ್ವವಿದ್ಯಾಲಯದ 2017ರ ಬಿ.ಕಾಂ. ತೃತೀಯ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, 100% ಫಲಿತಾಂಶ ಬಂದಿರುತ್ತದೆ. 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 1 ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ.

RELATED ARTICLES  ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನ ಪ್ರಮಾಣಿಕರಾಗಿದ್ದಾರೆ : ಮಂಕಾಳ ವೈದ್ಯ

ಸದರಿ ಪರೀಕ್ಷೆಯಲ್ಲಿ ದಿವ್ಯಾ ಬಿ.ನಾಯ್ಕ 90%, ಜಾನಕಿ ಎಮ್.ನಾಯ್ಕ 82%, ಸುಶ್ಮಿತಾ ಎಮ್.ನಾಯ್ಕ 80%, ಮಂಜುನಾಥ ಪ್ರಭು 78%, ನಂದನ ಶ್ಯಾನಭಾಗ 77%, ದಿವ್ಯಾ ಪಿ. ನಾಯ್ಕ 75% ಹಾಗೂ ಹರೀಶ ಮೋಗೆರ 70% ಪಡೆದಿರುತ್ತಾರೆ.

RELATED ARTICLES  ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ.

ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.