ಕುಮಟಾ: ತಾಲೂಕಿನ ಹವ್ಯಕ ಸಭಾಬವನದಲ್ಲಿ ಕುಮಟಾ ರೋಟರಿ ಸರ್ವಿಸ್ ಸೋಸೈಟಿ ಪ್ರವರ್ತಿತ ಹಾಗೂ ನಾದಶ್ರೀ ಕಲಾ ಕೇಂದ್ರ ಇವರ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಈ ಸಂಸ್ಥೆಯಿಂದ ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಸಂಗೀತಾ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸಂಗೀತಾ ಪಾಠ ಮಾಡುತಿದ್ದು ಸಂಗೀತಾ ಕ್ಷೇತ್ರಕ್ಕೆ ಒಂದು ಉತ್ತಮ ಕೊಡುಗೆ ನೀಡಲಾಗುತ್ತಿದೆ.ಅದರಂತೆ ಇಂದು ಈ ಸಂಸ್ಥೆಯ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಸಲಾಯಿತು
ಈ ವೇಳೆ ಗಾಯನ ವಾದನ,ತಬಲಾ ಸೋಲೊ,ಹಿಂದೂಸ್ಥಾನಿ ಗಾಯನ್,ಮುಂತಾದ ಸಂಗೀತ ಕಾರ್ಯಮ್ರವನ್ನು ವಿದ್ಯಾರ್ಥಿಗಳು ನೆರದಿದ್ದ ಜನರ ಮುಂದೆ ತೋರ್ಪಡಿಸಿದರು. ಕುಚಿಪುಡಿ ನೃತ್ಯ ಹಾಗೂ ಭರತ ನಾಟ್ಯಗಳು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
RELATED ARTICLES ಶಿರಸಿ ನಗರ ವ್ಯಾಪ್ತಿಯಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ: ಶಶಿಭೂಷಣ ಹೆಗಡೆಯವರಿಗೆ ಇನ್ನಷ್ಟು ಬಲ.
ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ವಸಂತ ರಾವ್, ಗಣ್ಯರಾದ ಆರ್,ಜಿ,ಗುನಗಿ,ಜಿ.ಎಸ್ ಭಟ್,ಶ್ರೀಕಾಂತ ಭಟ್, ಎಂ,ಬಿ ಪೈ ಮುಂತಾದವರು ಉಪಸ್ಥಿತರಿದ್ರು. ಮತ್ತು ವಿದ್ಯಾರ್ಥಿಗಳ ಪಾಲಕರು ಭಾಗಿಯಾಗಿದ್ದರು.