ಭಟ್ಕಳ :* Dr.B.R Ambedkar ಯುವಕ ಸಂಘ ಹಾಗೂ ಸಾಂಸ್ಕೃತಿಕ ಕ್ರೀಡಾ ಇಲಾಖೆಯ 29ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ವ್ರತ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಹಡಿನಬಾಳದ ಮುಸ್ಕಲ್ ಮಕ್ಕೀಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಶಾಸಕ ಮಾಂಕಾಳ್ ವೈದ್ಯರವರು ಉದ್ಘಾಟಿಸಿದರು.

ಮಕ್ಕಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ಪುತ್ರರು ಅವರ ಹೆಸರಿನಲ್ಲಿ ಸಂಘ ಕಟ್ಟಿಕೊಂಡು ವಿಶೇಷ ಕಾರ್ಯಕ್ರಮ ಮಾಡುತ್ತಿದ್ದೀರಿ ನಿಮಗೆ ಅಭಿನಂದಿಸುತ್ತೆನೆ. ಒಳ್ಳೆ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ವಿಚಾರ. ಶಿಕ್ಷಣಕ್ಕೆ ಮತ್ತು ಕ್ರೀಡೆಗೆ ಮಹತ್ವ ನೀಡುತ್ತಿರುವುದು ಒಳ್ಳೆಯ ಸಂಗತಿ ಇನ್ನೂ ಹೆಚ್ಚಿನ ಶಿಕ್ಷಣಕ್ಕೆ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಅಂಬೇಡ್ಕರ ವಸತಿ ಶಾಲೆ ಅಳ್ಳಂಕಿಯಲ್ಲಿ ಪ್ರಾರಂಭಿಸಿದ್ದೇನೆ. ನಿಮ್ಮ ಮಕ್ಕಳು ಅಂತ ಶಾಲೆಯಲ್ಲಿ ಶಿಕ್ಷಣ ಪಡೆದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಈ ಹಿಂದೆ ರಸ್ತೆಗೆ ಮನವಿ ನೀಡಿದ್ದರು. ಇಲ್ಲಿ ರಸ್ತೆ ಮಂಜೂರಿ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಬಡವರನ್ನು ಗುರುತಿಸಿ ಅವರಿಗೆ ಸಿಗುವ ಸೌಲಭ್ಯ ಒದಗಿಸಿದ್ದೇನೆ. ಯುವಕ ಸಂಘದವರು ಹೆಚ್ಚು ಆಸಕ್ತಿ ತೋರಿಸಿ ನಿಮ್ಮ ನಿಮ್ಮ ಊರಿನ ಅಭಿವೃದ್ಧಿ ಗೆ ಶ್ರಮಿಸಬೇಕು ಎಂದು ಶಾಸಕ ವೈದ್ಯ ಹೇಳಿದರು.

RELATED ARTICLES  ನ.29 ಕ್ಕೆ ಕುಳ್ಳೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ

ಈ ಸಂಧರ್ಬದಲ್ಲಿ ಲೋಕೇಶ್ ನಾಯ್ಕ, ಕೃಷ್ಣ ಗೌಡ, ಗೋಪಾಲ ನಾಯ್ಕ, ಸುನಿತಾ ಶೇಟ್, ಶಿವಮ್ಮ ಹಳ್ಳೆರ್, ಚಂದ್ರಹಾಸ ನಾಯ್ಕ, ವಿಷ್ಣು ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಕುಮಟಾದ ಪ್ರಮುಖ ಕಡಲ ತೀರದಲ್ಲಿ ಸೆಕ್ಷನ್ 144 ( ನಿಷೇದಾಜ್ಞೆ) ಜಾರಿ.