ಶಿರಸಿ: ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ವಿಮೆ ಸೌಲಭ್ಯ ಅತ್ಯುತ್ತಮವಾಗಿದೆ. ಪತ್ರರ್ಕತರು ಖಡ್ಡಾಯವಾಗಿ ವಯಕ್ತಿಕ ವಿಮೆಯನ್ನು ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ ಬಕ್ಕಳ್ ಕರೆ ನೀಡಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ “ಭಾನುವಾರ ಬೈಕ್ ಅಪಘಾತದಲ್ಲಿ ಮೃತರಾದ ಪತ್ರಕರ್ತ ಮೌನೇಶ್ ಸಾವಿನ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ
ಶ್ರದ್ಧಾಂಜಲಿ ಸಭೆಯಲ್ಲಿ ” ಮಾತನಾಡಿದ ಅವರು,
ಮೌನೇಶ್ ಅವರ ನಿಧನ ದುಃಖಕರ. ಅವರು ಮತ್ತೊಮ್ಮೆ ಪತ್ರಕರ್ತರಾಗಿ ಹುಟ್ಟಿಬರಲಿ. ಅವರು ವಿಮೆಯನ್ನು ಮಾಡಿಸಿಕೊಂಡಿದ್ದಲ್ಲಿ ಮನೆಯವರಿಯೆ ಅನುಕೂಲ ಆಗುತ್ತಿತ್ತು. ಆದ ಕಾರಣ ಪ್ರತಿಯೊಬ್ಬ ಪತ್ರಕರ್ತನೂ ವಿಮೆಯನ್ನು ಮಾಡಿಸಿಕೊಳ್ಳಬೇಕು. ಅವರ ನಿಧನ ಅಕಾಲಿಕ. ಯಾರಿಗೂ ಕಲ್ಪನೆಯಿಲ್ಲದ ಘಟನೆಯಿದು. ಅವರ ಮನೆಯವರಿಗೆ ಭಗವಂತ ದುಃಖ ಭರಿಸುವ ಶಕ್ತಿಯನ್ನು ಕೊಡಲಿ ಎಂದು ಕೇಳಿಕೊಂಡರು.
ಜಿಲ್ಲಾ ಸಂಘದ ಖಚಾಂಚಿ ಸಂಧ್ಯಾ ಹೆಗಡೆ ಮಾತನಾಡಿ ಮೌನೇಶ್ ಅವರು ಗೌರವ ನೀಡಿ ಗೌರವವನ್ನು ತೆಗೆದುಕೊಳ್ಳುವ ಸ್ವಭಾವ ಅವರದ್ದಾಗಿತ್ತು. ನಾವೂ ಸಹ ಅದನ್ನು ರೂಡಿಸಿಕೊಳ್ಳಬೇಕು. ಅವರ ಸಾಹಿತ್ಯ ಬರವಣಿಗೆ ಸಮಾಜಮುಖಿಯಾಗಿ ಇರುತ್ತಿತ್ತು. ಅವರ ನಿಧಕ ಅಕಾಲಿಕ ಎಂದರು.
ಪತ್ರಕರ್ತ ಗುರು ಅಡಿ ಮಾತನಾಡಿ ಮೌನೇಶ್ ಅವರ ಸಾವಿನ 10 ಗಂಟೆಯ ನಂತರವೂ ಅವರ ಶವವನ್ನು ಯಾರೂ ತೆಗೆದಿರಲಿಲ್ಲ. ಅವರ ಶವವನ್ನು ಕಸ ಸಾಗಿಸುವ ವಾಹನದಲ್ಲಿ ತೆಗೆದುಕೊಂಡು ಹೋದದ್ದು ಅಮಾನವೀಯ. ಅಧಿಕಾರಿಗಳು ಪತ್ರಕರ್ತರಲ್ಲಿ ಒಗ್ಗಟ್ಟು ಇಲ್ಲವೆಂದು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮೌನೇಶ್ ಅವರ ಬಂದ ಸಾವು ಶ್ರೀ ಸಾಮಾನ್ಯನಿಗೂ ಬರಬಾರದು. ಪತ್ರಕರ್ತರು ಇನ್ನು ಮುಂದೆ ಒಗ್ಗಟ್ಟಿನಿಂದ ಇರಬೇಕು ಎಂದರು.
ಪತ್ರಕರ್ತ ಗಣೇಶ ಮುರೇಗಾರ ಮೌನೇಶ್ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.
ಪತ್ರಕರ್ತರಾದ ರಾಜೇಂದ್ರ ಶಿಂಗನಮನೆ, ರಾಘವೇಂದ್ರ ಬೆಟ್ಟಕೊಪ್ಪ, ಮಾದೇವ ನಾಯ್ಕ, ಸಂದೇಶ್ ಭಟ್ ಬೆಳಖಂಡ, ಗುರು ಹೆಗಡೆ, ಪ್ರಸಾದ ಹೆಗಡೆ ಇದ್ದರು.