ಹೊನ್ನಾವರ: ತಾಲೂಕಿನ ಟೊಂಕ ಕಾಸರಕೊಡದಲ್ಲಿ ಜೈನ ಜಟಗೇಶ್ವರ ಯುವಕ ಸಮಿತಿಯ ದಶಮಾನೋತ್ಸವ ಸಮಾರಂಭ 2ನೇ ದಿನದ ಕಾರ್ಯಕ್ರಮವನ್ನು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ ನ ಅಧ್ಯಕ್ಷರಾದ ಶ್ರೀ ನಾಗರಾಜ ನಾಯಕ ತೋರ್ಕೆ ಉದ್ಘಾಟನೆ ನಡೆಸಿದರು.
ನಂತರ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳು ಸಾಮರಸ್ಯ ಹಾಗೂ ಸಂಸ್ಕ್ರತಿಯ ಉಳಿವಿಗೆ ಅಗತ್ಯವಾಗಿದೆ. ಈ ಸಂಘಟನೆ ಯಶ ಕಾಣಲಿ ಎಂದು ಹಾರೈಸಿದರು.
ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಜಿ. ಶಂಕರ್ ವಹಿಸಿದ್ದರು. ಈ ಸಂದರ್ಭದಲ್ಲಿ ಸೂರ್ಯಕಾಂತ ಸಾರಂಗ್,ವಿನಾಯಕ್ ಆಚಾರಿ, ಮುಂತಾದವರು ಉಪಸ್ಥಿತರಿದ್ದರು.