ಭಟ್ಕಳ : ತಾಲೂಕ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ವೈದ್ಯರು ಹಾಜರಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದ ರೋಗಿಗಳು ಪರದಾಡುವಂತಾಗಿದ್ದು , ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆಯನ್ನು ನಡೆಸಿದರು.
ಸೋಮವಾರ ತಾಲೂಕ ಆಸ್ಪತ್ರೆಗೆ ಯಾವುದೆ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಇರುವುದರಿಂದ ಆಸ್ಪತ್ರೆಗೆ ಬಂದ ರೋಗಿಗಳ ಬವಣೆಯನ್ನು ಯಾರು ಕೇಳದ ಪರಿಸ್ಥಿತಿ ನಿರ್ಮಾಣವಾಗಿತ್ತು ಈ ಸ್ಥಿತಿಯನ್ನು ಮನಗಂಡ ಸಾರ್ವಜನಿಕರು, ಪ್ರತಿಭಟನೆಗೆ ಮುಂದಾದರು.
ಕೊನೆಗೆ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭನೆ ನಡೆಸಲಾಯಿತು . ಈ ಸಂದರ್ಬದಲ್ಲಿ ಆಸ್ಪತ್ರೆಗೆ ತಲೆಗೆ ಪೆಟ್ಟಾಗಿ ರಕ್ತಸುರಿಸುತ್ತ ಬಂದ ರೋಗಿಯೊಬ್ಬರು ವೈದ್ಯರು ಸಿಗದೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಬದಲ್ಲಿ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ ಸರಕಾರಿ ತಾಲೂಕ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರು ಇರದೆ ಇರುವ ಕಾರಣ ರೋಗಿಗಳು ಗೋಳನ್ನು ಅನುಭವಿಸುವಂತಾಗಿದೆ ಜನರ ಗೋಳನ್ನು ಇಲ್ಲಿ ಯಾರು ಕೇಳುವವರಿಲ್ಲದಾಗಿದೆ ತಾಲೂಕ ಆಸ್ಪತ್ರೆಯಲ್ಲಿ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು ಒಬ್ಬ ವೈದ್ಯರು ಆಸ್ಪತ್ರೆಯಲ್ಲಿ ಇರಲೆ ಬೇಕು ಆದರೆ ಗಂಟೆ ಹನ್ನೊಂದು ಕಳೆದರು ವೈದ್ಯರು ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲಾ ಎಂದರು.
ಇದಕ್ಕೆ ಸಂಬಂದಿಸಿದಂತೆ ಇನ್ನಾದರೂ ಜಿಲ್ಲಾ ಆರೋಗ್ಯಾಧಿಕಾರಿ ಕ್ರಮವನ್ನು ಕೈಗೊಳ್ಳುತ್ತಾರೋ? ಎಂದು ಕಾದುನೋಡಬೇಕಾಗಿದೆ.