ಹಿಂದೂ ಭಯೋತ್ಪಾದನೆ ಅನ್ನೋದೂ ದೇಶದಲ್ಲಿದೆ ಅಂತ ಜಗತ್ತಿಗೆ ತೋರಿಸಲು ಹೆಣಗಾಡಿದ ಕಾಂಗ್ರೆಸ್, ಅದಕ್ಕಾಗಿ ಬಲಿಪಶು ಮಾಡಿದ್ದು ಹಿಂದೂ ಫೈರಬ್ರ್ಯಾಂಡ್ ಸಾಧ್ವಿ ಪ್ರಜ್ಞಾ ಸಿಂಗ್ ಜೀ ಯವರನ್ನ.
ಮಹಾರಾಷ್ಟ್ರದ ಮಾಲೇಗಾಂವ್ ನಲ್ಲಿ 2008 ರಲ್ಲಿ ಸ್ಪೋಟವೊಂದು ಸಂಭವಿಸುತ್ತೆ, ಆ ಸ್ಪೋಟದ ಹಿಂದಿನ ರೂವಾರಿಗಳು ಯಾರು ಎಂಬುದನ್ನ ತನಿಖೆ ಮಾಡಲು ಮಹಾರಾಷ್ಟ್ರದ ಭಯೋತ್ಪಾನ ನಿಗ್ರಹ ದಳ(ATS) ನಿರತವಾಗಿತ್ತು.
ಇದೇ ಸಮಯವನ್ನ ಬಳಸಿಕೊಂಡ ಕಾಂಗ್ರೆಸ್ ತನ್ನ ಮುಸ್ಲಿಂ ತುಷ್ಟೀಕರಣದ ನೀತಿಗೋ ಏನೋ “ಭಯೋತ್ಪಾದನೆ ಧರ್ಮವಿಲ್ಲ” ಎಂಬ ಮಾತನ್ನ ನಿಜ ಮಾಡಲು ಹಿಂದೂ ಭಯೋತ್ಪಾದನೆ ಯೂ ಇದೆ ಅಂತ ಜಗತ್ತಿಗೆ ತೋರಿಸಲು
ಅಮಾಯಕ ಸಂತ ಪ್ರಜ್ಞಾ ಸಿಂಗ್ ಠಾಕೂರ್ ರನ್ನ ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸದೆಯೇ ಎಂಟು ವರ್ಷಗಳ ಕಾಲ ಜೈಲಿನಲ್ಲಿ ಹೆಣ್ಣು ಅನ್ನೋದನ್ನೂ ನೋಡದೆ ಚಿತ್ರಹಿಂಸೆ ನೀಡಿ, ಸೊಂಟ ಮುರಿದು ಬರ್ಬರವಾಗಿ ನಡೆಸಿಕೊಂಡಿತ್ತು.
ಆದರೆ ಆ ಅಮಾಯಕ ಸಂತ ಪ್ರಜ್ಞಾ ಸಿಂಗ್ ಜೀ ಕೆಲ ತಿಂಗಳ ಹಿಂದೆ ಜೈಲಿನಿಂದ ಸೂಕ್ತ ಸಾಕ್ಷಿಗಳಿಲ್ಲದ ಕಾರಣ ಬೇಲ್ ಪಡೆದು ಹೊರಬಂದಿದ್ದರು.
ಮಹಾರಾಷ್ಟ್ರದಲ್ಲಿ ಸಂತರನ್ನ ಭಯೋತ್ಪಾದನಾ ಕೃತ್ಯದಲ್ಲಿ ಸಿಲುಕಿ ಹಾಕಿಸಲು ಅಧರ್ಮಿಗಳು ಕುತಂತ್ರ ನಡೆಸಿದ್ದರೆ ಇತ್ತ ಕರ್ನಾಟಕದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜೀಗಳನ್ನ ಸುಳ್ಳು ಅತ್ಯಾಚಾರದ ಆರೋಪದ ಮೇಲೆ ಟಾರ್ಗೇಟ್ ಮಾಡಲಾಗಿತ್ತು.
ಕೋರ್ಟಿನಲ್ಲಿ ಶ್ರೀಗಳ ಮೇಲಿನ ಕೇಸ್ ಸಾಬೀತಂತೂ ಆಗಲಿಲ್ಲ, ವಿರೋಧಿಗಳಿಗೆ ಸೋಲುಂಟಾಯಿತು.
ಸತ್ಯಕ್ಕೆ ಯಾವತ್ತೂ ಸುಳ್ಳಿಲ್ಲ ಅನ್ನೋದು ಇವರೀರ್ವರ ಪ್ರಕರಣದಿಂದ ಸಾಬೀತಾಗುತ್ತೆ.
ಆದರೆ ಈಗ ವಿಷ್ಯ ಅದಲ್ಲ, ಈಗ ತಾನೆ ಬಂದ ಸುದ್ದಿಯ ಪ್ರಕಾರ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಶಂಕರ ಪರಂಪರೆಯ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಭೇಟಿ ಮಾಡಿದ್ದಾರೆ.
ಭೇಟಿಯ ಕುರಿತು ಏನಿದೆ ಆ ಟ್ವಿಟ್ಟರ್ ಸ್ಟೇಟಸ್ ನಲ್ಲಿ?
ಮೊದಲ ಟ್ವೀಟ್
“ಇಂದು ಸಾಧ್ವಿ ಪ್ರಜ್ಞಾ ಸಿಂಗ್ ಜೊತೆಗೊಂದು ಸ್ಮರಣೀಯ ಸಂವಾದ:
ಭಾರತ ದೇಶದ ಆತ್ಮವೇ ಆದ ಸಂತವೃಂದದ ಸರ್ವನಾಶಕ್ಕಾಗಿ ಒಳಹೊರಗಿನ ದುಷ್ಟಶಕ್ತಿಗಳು ಕಲೆತು ಎಂಥೆಂಥ ಷಡ್ಯಂತ್ರಗಳನ್ನು ನಡೆಸುತ್ತಿವೆಯೆಂಬುದು ಮತ್ತೊಮ್ಮೆ ಮನಸ್ಸಿಗೆ ಮುಟ್ಟಿತು-ತಟ್ಟಿತು!”
ಎರಡನೇ ಟ್ವೀಟ್
“ನಿಮ್ಮ ಬಳಿ ಮಠ ಇತ್ತು; ದುಷ್ಕರ್ಮಿಗಳು ಮಠವನ್ನೇ ಷಡ್ಯಂತ್ರದ ಮಾಧ್ಯಮವಾಗಿಸಿದರು!
ನನ್ನ ಬಳಿ ಸಣ್ಣದೊಂದು ದ್ವಿಚಕ್ರವಾಹನವಿತ್ತು; ಧರ್ಮಶತ್ರುಗಳು ಅದನ್ನೇ ಷಡ್ಯಂತ್ರದ ದಾಳವಾಗಿಸಿದರು!
– ಸಾಧ್ವಿ ಪ್ರಜ್ಞಾ ಸಿಂಗ್ ನಿನ್ನೆ ನಮಗೆ ನುಡಿದ ನುಡಿಗಳು..”
ಈಗ ಭೇಟಿಯ ಫೋಟೋಗಳು ಮತ್ತು ಶ್ರೀಗಳ ಸ್ಟೇಟಸ್ ನ್ನ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಅನೇಕ ಜನ ಶೇರ್ ಮಾಡಿಕೊಂಡಿದ್ದು ಇದೀಗ ವೈರಲ್ ಆಗಿದೆ.
ಆದರೆ ಸಾಧ್ವಿ ಪ್ರಜ್ಞಾ ಸಿಂಗ್ ಜೀ ಹಾಗು ಶ್ರೀಗಳ ಭೇಟಿಯ ಉದ್ದೇಶದ ಬಗ್ಗೆ ಯಾವ ಮಾಹಿತಿಯೂ ಸದ್ಯಕ್ಕೆ ತಿಳಿದು ಬಂದಿಲ್ಲ.