ಅಮೆರಿಕ ಹಾಗೂ ಲಂಡನ್ ಮಾದರಿಯಲ್ಲಿ ನಗರದ ಜನರು ತುರ್ತು ಸೇವೆಗಾಗಿ ಒಂದೇ ಸಹಾಯವಾಣಿ ಸಂಖ್ಯೆ ಬಳಕೆ ಮಾಡುವ ಮಹತ್ವದ ಯೋಜನೆಗೆ ಶನಿವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಒಂದೇ ಸೂರಿನಡಿ ಎಲ್ಲ ಸೇವೆಗಳು ಲಭ್ಯವಾಗುವ ನಿಟ್ಟಿನಲ್ಲಿ ರಾಜ್ಯ ಗೃಹ ಸಚಿವಾಲಯ “100” ಸಹಾಯವಾಣಿಯನ್ನು ಚಾಲನೆಗೆ ತಂದಿದೆ. ಈ ನೂತನ ಸಹಾಯವಾಣಿ ಮೂಲಕ ರಾಜ್ಯದ ನಾಗರಿಕರು 100 ಸಂಖ್ಯೆಗೆ ಕರೆ ಮಾಡುವ ಮೂಲಕ ಆ್ಯಂಬುಲೆನ್ಸ್, ಅಗ್ನಿಶಾಮಕ, ಸಂಚಾರ ನಿರ್ವಹಣಾ ಕೇಂದ್ರ, ವನಿತಾ ಸಹಾಯವಾಣಿ, ಹಿರಿಯರ ಸಹಾಯವಾಣಿ, ಮಕ್ಕಳ ಸಹಾಯವಾಣಿ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದಾಗಿದೆ.
RELATED ARTICLES  ನಾಳೆ ಉತ್ತರಕನ್ನಡದಲ್ಲಿ ಅತೀ ಹೆಚ್ಚು ಕೊರೋನಾ ಲಸಿಕೆ‌ ಲಭ್ಯ