ಗೋಕರ್ಣ: ಪುರಾಣಪ್ರಸಿದ್ದ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇದರ ಜೊತೆಯಲ್ಲಿ ಪರಿಸರ ಮಾಲಿನ್ಯಯ ಸಹ ಅಧಿಕವಾಗುತ್ತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಕ್ , ಕಸ ಕಡ್ಡಿಗಳನ್ನು ಬಿಸಾಡುತ್ತಿದ್ದು , ಕಸದ ರಾಶಿ ಬೀಳುತ್ತಿದೆ. ಇದರ ಬಗ್ಗೆ ತಿಳುವಳಿಕೆ ನೀಡುವದರ ಜೊತೆಗೆ , ಸ್ಷಚ್ಚ ಗೋಕರ್ಣ ಮಾಡಲು ವಿದೇಶಿ ಮಹಿಳೆ ಟೊಂಕಕಟ್ಟಿ ನಿಂತಿದ್ದಾಳೆ . ಈ ಮೂದಲು ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗರು ಆಗಮಿಸಲು ಪ್ರಾರಂಭಿಸಿದಾಗ ಮೋಜು ಮಸ್ತಿ ಮಾಡುತ್ತಾರೆ ಕ್ಷೇತ್ರ ಪಾವಿತ್ರ್ಯ ಹಾಳಾಮಾಡುತ್ತಾರೆ ಎಂದು ಆಡಿಕೊಳ್ಳುತ್ತಿದ್ದರು. ಆದರೆ ವಿದೇಶಿ ಪ್ರವಾಸಿಗರೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.
ಪೋರ್ಚುಗಲ್ ದೇಶದ ಮಹಿಳೆ ಅನ್ನಾ ಶುದ್ದ ಗೋಕರ್ಣ ಆಂದೋಲನ ಅಡಿಯಲ್ಲಿ ಸ್ವಂಯ ಸೇವಾ ಸಂಘ ರಚಿಸಿಕೊಂಡು ಪರಿಸರ ಜಾಗೃತಿ ಮೂಡಿಸುವ ಕೆಲಸ ಕಳೆದ 1 ವರ್ಷದಿಂದ ಮಾಡುತ್ತಿದ್ದಾರೆ. ಮುಖ್ಯರಸ್ತೆ ಮತ್ತು ವಿವಿಧ ಕಡೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲು ಬೃಹತ ಚೀಲಗಳನ್ನಿರಿಸಿ ಪ್ರವಾಸಿಗರಿಗೆ ಮತ್ತು ನಾಗರಿಕರಿಗೆ ಪ್ಲಾಸ್ಟಿಕಬಾಟಲಿ ಗಳನ್ನು ಇಲ್ಲೆ ಹಾಕಿ ಎಂದು ಬರೆದು ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಶೂನ್ಯ ತ್ಯಾಜ್ಯ ಗೋಕರ್ಣ ಯೋಜನೆಯ ಅನ್ವಯ ತ್ಯಾಜ್ಯ ಉತ್ಪಾದಕರ ಕರ್ತವ್ಯಗಳು , ತ್ಯಾಜ್ಯಗಳ ವಿಲೇವಾರಿಯಲ್ಲಿ ಸ್ಥಳೀಯ ಪ್ರಾಧಿಕಾರ ಮತ್ತು ನಾಗರಿಕರ ಕರ್ತವ್ಯ ಕುರಿತಾಗಿ ಕರಪತ್ರ ಮಾಡಿ ಪ್ರತಿಯೊಂದು ಕಡೆ ಹಂಚಿದ್ದಾರೆ. ಅಲ್ಲದೇ ವಿವಿಧ ಕಡೆಗಳಲ್ಲಿ ತ್ಯಾಜ್ಯಗಳು ಬಿದ್ದರುವುದರ ಬಗ್ಗೆ ಪೋಟೋ ಗಳನ್ನು ಅಧಿಕಾರಿಗಳಿಗೆ ರವಾನಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಇಲ್ಲಿನ ಆಡಳಿತ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ವಿದೇಶಿ ಮಹಿಳೆ ಮಾಡುತ್ತಿರುವುದು ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ. ಇದರ ಜೊತೆಯಲ್ಲಿ ಖುಷಿ ಪರಿಸರ ಹೆಸರಿನ ವೆಬ್ ಸೈಟ್ ಪ್ರಾರಂಭಿಸಿ , ಆಮೂಲಕ ತ್ಯಾಜ್ಯ ವಸ್ತುಗಳ ವಿಲೇವಾರಿಯಲ್ಲಿ ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳ ಕರ್ತವ್ಯಗಳ ಅರಿವು ಮೂಡಿಸುವ ಕಾರ್ಯ ಸಹ ಮಾಡುತ್ತಿದೆ. ಎಲ್ಲಿಂದಲೂ ಬಂದು ಇಲ್ಲಿನ ಪರಿಸರದ ಬಗ್ಗೆ ಕಾಳಜಿಯಿಂದ ಕೆಲಸ ಮಾಡುತ್ತಿದ್ದಾರೆ.
ಕಳೆದ ವರ್ಷ ಶಿವರಾತ್ರಿ ಮಹೋತ್ಸವದ ಸಮಯದಲ್ಲಿ ಪ್ರಾರಂಭವಾದ ಖುಷಿ ಪರಿಸರ ಗೋಕರ್ಣದ ಯೋಜನೆಗೆ ತ್ಯಾಜ್ಯ ನಿರ್ವಹಣೆಯಲ್ಲಿ ಸರ್ಕಾರದ ನಿಯಾಮವಳಿಗಳ ಬಗ್ಗೆ ಅಧಿಕಾರಿಗಳಿಗೆ ಮನದಟ್ಟು ಮಾಡಿ , ಕರ್ತವ್ಯ ಲೋಪ ಎಸಗದಂತೆ ಕಾರ್ಯ ನಿರ್ವಹಿಸಲು ಅಧಿಕಾರಿ ವರ್ಗವನ್ನು ಬಡಿದ್ದೆಬ್ಬಿಸಿ ಆ ಮೂಲಕ ಕಸದ ನಿರ್ಮೂಲನೆ ಕುರಿತಾಗಿ ಅತೀವ ಕಾಳಜಿ ತೋರಿರುವ ಪರಿಸರ ಪ್ರೇಮಿ ಅನ್ನಾರ ಕ್ರೀಯಾಶೀಲತೆಗೆ ಅಧಿಕಾರಿಗಳೆ ಅಚ್ಚರಿಗೊಂಡಿದ್ದರು.
ಈ ವರ್ಷ ಬಸ್ ನಿಲ್ಧಾಣ ಹಾಗೂ ಸುತ್ತಲಿನ ಸ್ವಚ್ಛತೆ ಕುರಿತು ಅಧಿಕಾರಿಗಳಿಗೆ ಮನವಿ :ಇಲ್ಲಿನ ಬಸ್ ನಿಲ್ದಾಣ ಅಸ್ವಚ್ಛತೆ ಮತ್ತು ಸುತ್ತಮುತ್ತಲಿನ ಮಲಿನ ಕುರಿತು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕರಗಳಿಗೆ ಮನವಿ ಮಾಡಿ ಆಮೂಲಕ ಸ್ಷಚ್ಛ ಪರಿಸರ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ.
ತನ್ನ ಬಗ್ಗೆ ಯಾವುದೇ ಪ್ರಚಾರ ಬೇಡ ಗೋಕರ್ಣದಲ್ಲಿ ಸ್ವಚ್ಛ ಪರಿಸರ ನಿರ್ಮಾಣ ಆದರೆ ಅದೇ ನನಗೆ ಖುಷಿ ಎನ್ನು ತ್ತಾರೆ ಅನ್ನಾ