ಲಂಡನ್: ಸುಗಂಧ ದ್ರವ್ಯ ಅಥವಾ ಪರ್ಫ್ಯೂಮ್ ಗಳನ್ನು ಹಾಕಿಕೊಳ್ಳುವುದು ಆಕರ್ಷಣೀಯವಾಗಿರುತ್ತದೆ. ಆದರೆ ಈ ರೀತಿಯ ಸುಗಂಧ ದ್ರವ್ಯಗಳಿಂದ, ಪರ್ಫ್ಯೂಮ್ ಗಳಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಸಂಶೋಧನಾ ವರದಿ ಹೇಳಿದೆ.
ಪರ್ಫ್ಯೂಮ್ ಗಳಿಂದ ತಲೆನೋವು, ಆಸ್ತಮಾ, ರಾಷಸ್ ಗಳ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ಕೇಟ್ ಗ್ರೆನ್ವಿಲ್ಲೆ ಬರೆದಿರುವ ದಿ ಕೇಸ್ ಅಗೆನೆಸ್ಟ್ ಫ್ರಾಗ್ನೆನ್ಸ್ ಎಂಬ ಸಂಶೋಧನಾ ಬರವಣಿಗೆ ಮೂಲಕ ತಿಳಿದುಬಂದಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ 2014 ರಲ್ಲಿ ನಡೆಸಿದ್ದ ಅಧ್ಯಯನದ ಫಲಿತಾಂಶವೂ ಈಗಿನ ಸಂಶೋಧನಾ ಬರವಣಿಗೆಗೆ ಪೂರಕವಾಗಿದ್ದು, 2014 ರಲ್ಲಿ ಸಮೀಕ್ಷೆಗೊಳಪಡಿಸಲಾಗಿದ್ದ ಮಹಿಳೆಯರ ಪೈಕಿ ಮುಕ್ಕಾಲು ಭಾಗದಷ್ಟು ಮಹಿಳೆಯರಿಗೆ ಉಂಟಾಗಿದ್ದ ಮೈಗ್ರೇನ್ ಗೆ ಪರ್ಫ್ಯೂಮ್ ಕಾರಣ ಎಂದು ಹೇಳಲಾಗಿತ್ತು.
ಆಧುನಿಕ ಕಾಲದ ಬಹುತೇಕ ಪರ್ಫ್ಯೂಮ್ ಗಳು ಕೃತಕ ರಾಸಾಯನಿಕಗಳಿಂದ ತಯಾರಾಗಿದ್ದು, ತಲೆನೋವು, ಆಸ್ತಮಾ, ರಾಷಸ್ ಗಳ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂಬುದು ಅಧ್ಯಯನ ವರದಿಯ ಸಾರಾಂಶವಾಗಿದೆ.