ಶಿರಸಿ: ಶಿರಸಿಯಲ್ಲಿ ನಟ ಪ್ರಕಾಶ್ ರೈ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದಾರೆ.
ಶಿರಸಿ ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಪ್ರೀತಿ ಪದಗಳ ಪಯಣ ಸಮಿತಿಯು ಶನಿವಾರ ನಮ್ಮ ಸಂವಿಧಾನ-ನಮ್ಮ ಹೆಮ್ಮೆ ಹೆಸರಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದ ಪ್ರಕಾಶ್ ರೈ ಅವರು ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ಟೀಕಿಸಿದ್ದರು,
ಬಳಿಕ ಪ್ರಕಾಶ್ ರೈ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದರು.
ಗೋಮಾಂಸ ತಿನ್ನುವವರು ಹಾಗೂ ಹಿಂದೂ ದೇವತೆಗಳಿಗೆ ಅಗೌರವ ತೋರುವ ವ್ಯಕ್ತಿಯ ಭೇಟಿಯಿಂದ ಶಿರಸಿ ನಗರವೇ ಮಲಿನವಾಗಿದೆ. ಇಂತಹ ಸೋಗಲಾಡಿ ಬುದ್ಧಿಜೀವಿ ಪ್ರಕಾಶ್ ರೈ ಅವರನ್ನು ಹಿಂದೂ ಸಮಾಜ ಕ್ಷಮಿಸದು. ಕಾರ್ಯಕ್ರಮದಿಂದ ಅಪವಿತ್ರಗೊಂಡಿದ್ದ ಧಾರ್ಮಿಕ ಕ್ಷೇತ್ರವನ್ನು ಗೋಮೂತ್ರ ಹಾಕಿ ಶುದ್ಧಗೊಳಿಸಲಾಯಿತು ಎಂದು ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವಿಶಾಲ್ ಮರಾಠೆಯವರು ಹೇಳಿದ್ದಾರೆ.