ಕಾರವಾರ: ನಗರದಲ್ಲಿಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದ ಪ್ರಜೆಗಳು ಹಾಗೂ ರೋಹಿಂಗ್ಯಾಗಳು ಅಕ್ರಮವಾಗಿ ಬಂದು ನೆಲೆಸುತ್ತಿದ್ದಾರೆ. ಇಂಥವರ ಮೇಲೆ ಪೋಲಿಸ್ ಇಲಾಖೆ ತೀವ್ರ ನಿಗಾ ಇರಿಸಬೇಕುಎಂದು ಭಾರತೀಯಜನತಾ ಪಾರ್ಟಿ ಆಗ್ರಹಿಸಿದೆ.
ಈ ಕುರಿತುಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿದ ಬಿಜೆಪಿ ನಗರಘಟಕ, ಕಾರವಾರದಲ್ಲಿ ಸೀಬರ್ಡ್, ನೌಕಾನೆಲೆಯಂಥದೇಶದ ಪ್ರತಿಷ್ಠಿತ ಹಾಗೂ ಸೂಕ್ಷ್ಮವಾದ ಯೋಜನೆಗಳಿವೆ. ಬಾಂಗ್ಲಾದೇಶ ನಾಗರೀಕರುಅಕ್ರಮವಾಗಿಇಲ್ಲಿಗೆ ಬಂದುತಾವು ಪಶ್ಚಿಮ ಬಂಗಾಳದವರೆಂದು ಹೇಳಿಕೊಂಡು ಕಟ್ಟಡಕಾರ್ಮಿಕರಾಗಿಕಾರ್ಯನಿರ್ವಹಿಸುತ್ತಿದ್ದಾರೆ. ಇವರುಗಳ ವಿಳಾಸ,ಊರುಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಾರಿಗೂಇರುವುದಿಲ್ಲ. ಇಂಥ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಇಲ್ಲಿಅಕ್ರಮವಾಗಿ ನೆಲೆಸಿರುವ ಈ ಬಾಂಗ್ಲಾದೇಶಿಯರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರು ಸಮಾಜಘಾತುಕ ಶಕ್ತಿಗಳೊಂದಿಗೆ ಯಾವುದಾದರೂ ಸಂಬಂಧದ ಹೊಂದಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು.
ಅಪರಿಚಿತರಿಗೆ ಮನೆ ಅಥವಾ ಪ್ಲ್ಯಾಟ್ ಬಾಡಿಗೆಗೆ ನೀಡುವಾಗ ಮಾಲಿಕರುಅವರ ವಿಳಾಸ ಮತ್ತಿತ್ತರ ಮಾಹಿತಿಗಳನ್ನು ಕಡ್ಡಾಯ ಪಡೆದುಕೊಳ್ಳಬೇಕು. ಹಾಗೂ ಸಂಶಯಾಸ್ಪದ ವ್ಯಕ್ತಿಗಳಿದ್ದರೆ ಅವರ ಬಗ್ಗೆ ಪೋಲಿಸ್ ಇಲಾಖೆಯೊಂದಿಗೆ ಮಾಹಿತಿ ಹಂಚಿಕೊಳ್ಳುವಂತೆ ಸಾರ್ವಜನಿಕರಲ್ಲಿಅರಿವು ಮೂಡಿಸುವಂತ ಕೆಲಸ ಪೋಲಿಸ್ ಇಲಾಖೆಯಿಂದಾಗಬೇಕು. ರಾತ್ರಿ ವೇಳೆಯ ಪೋಲಿಸ್ ಗಸ್ತು ಹೆಚ್ಚಿಸಿ, ಪೋಲಿಸ್ ಇಂಟಲಿಜೆನ್ಸಿಯನ್ನು ಬಲಪಡಿಸಬೇಕುಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ನಗರಘಟಕದಅಧ್ಯಕ್ಷ ಮನೋಜ್ ಭಟ್, ಉದಯ ಬಶೆಟ್ಟಿ, ಮಾಲ ಹುಲಸ್ವಾರ ಮುಂತಾದವರಿದ್ದರು.