ಹೊನ್ನಾವರ : ತಾಲೂಕಿನ ಕಡತೋಕ ಪಂಚಾಯತ್ ವ್ಯಾಪ್ತಿಯಲ್ಲಿನ ಕೆಕ್ಕಾರದಲ್ಲಿ ಗ್ರಾಮದ ಲಕ್ಕುಮನೆಕೇರಿಗೆ ಹೋಗುವ ಹಳ್ಳಕ್ಕೆ “2017-18 ನೇ ಸಾಲಿನ ಆರ್ಥಿಕ ವರ್ಷದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದ ಯೋಜನೆ”ಯಡಿ ಅಂದಾಜು 20 ಲಕ್ಷ ಅನುದಾನದ ಕಾಮಗಾರಿಗೆ ಕುಮಟ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿಪೂಜೆ ನೆರವೇರಿಸಿದರು.

RELATED ARTICLES  ನಿರ್ಗತಿಕರಿಗೆ ಸೂರಾಗಲಿದೆ ಸುಯೋಗ ಪೌಂಡೇಶನ್.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸಿದ್ಧರಾಮಯ್ಯನವರ ಸರಕಾರ ನಮಗೆ ಅಗತ್ಯ ಇರುವ ಎಲ್ಲ ಹೆಚ್ಚಿನ ಅನುದಾನಗಳನ್ನು ಬಿಡುಗಡೆಗೊಳಿಸಿ ಪ್ರತೀ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದೆ. ನಮಗೆ ಜನ ಸೇವೆಗೆ ಸಿಕ್ಕ ಅವಕಾಶಕ್ಕಾಗಿ ನಾನು ಸಂತಸ ಪಡುತ್ತೇನೆ .ಹಳ್ಳಿ ಹಳ್ಳಿಗಳ ಅಭಿವೃದ್ಧಿ ನಮ್ಮ ಗುರಿ ಎಂದರು.

RELATED ARTICLES  ವಯಸ್ಸಿಗೆ ಮೀರಿದ ವಿಶೇಷ ಸಾಮರ್ಥ್ಯದ ಅನಿಕೇತ್ ಭಟ್.

ಈ ಸಂದರ್ಭದಲ್ಲಿ ಕೆಕ್ಕಾರ ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.