ಶ್ರೀಗೋಕರ್ಣ ಮಂಡಲಾಚಾರ್ಯ, ಶ್ರೀ ಮದ್ರಾಮಚಂದ್ರಾಪುರ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ
ಹವ್ಯಕ ಮಹಾ ಮಂಡಲದ ಮುಳ್ಳೇರಿಯಾ ಮಂಡಲದ ವಿದ್ಯಾರ್ಥಿ ವಾಹಿನಿ ಸಹಕಾರದೊಂದಿಗೆ ಈಶ್ವರಮಂಗಲ ವಲಯದ ಪ್ರಾಯೋಜಕತ್ವದಲ್ಲಿ ಈಶ್ವರಮಂಗಲ ಶ್ರೀ ಗಜಾನನ ಫ್ರೌಢಶಾಲೆಯಲ್ಲಿ ತಾ 15-1-2018 ರಂದು ಚಂದ್ರವಾರ ,ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ” ಪರೀಕ್ಷೆ-ನಿರೀಕ್ಷೆ ” ಮಾರ್ಗದರ್ಶನ ಕಾರ್ಯಾಗಾರ ಕಾರ್ಯಕ್ರಮ ಬೆಳಿಗ್ಗೆ 10.00 ಗಂಟೆಯಿಂದ ನಡೆಯಿತು.

ಶಾಲಾ ಸಂಚಾಲಕರಾದ ಶ್ರೀಯುತ ಪಿ.ಶಿವರಾಮ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಪ್ರಾಶುಪಾಲ ಶ್ರೀ ಕೆ.ಶ್ಯಾಮಣ್ಣ ಇವರು ಪ್ರಸ್ತಾವನೆಗೈದರು.

” ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ” ಎಂಬ ವಿವೇಕಾನಂದ ಸ್ವಾಮೀಯವರ ಧ್ಯೇಯ ವಾಕ್ಯವನ್ನು ಉದ್ದೇಶಿಸಿ
ನಿವೃತ್ತ ಪ್ರಾಂಶುಪಾಲರು,
ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತುದಾರರು,
ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರು ಮತ್ತು
ಆಕಾಶವಾಣಿ ಗಮಕಕಲಾವಿದರೂ
ಶ್ರೀ ರಾಮಚಂದ್ರಾಪುರ ಮಠದ
ಪುರಾಲೇಖ ವಿಭಾಗದ ಸಹಕಾರ್ಯದರ್ಶಿಯೂ ಆಗಿರುವ ಮಾನ್ಯ ಶ್ರೀ ಉಂಡೆಮನೆ ಯು.ಯಸ್.
ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳನ್ನು ಕಾರ್ಯಕ್ರಮದತ್ತ ಸೆಳೆಯುತ್ತಾ ವಿಶೇಷ ತರಗತಿ ಆರಂಭಿಸಿದರು. ಈಗಲೇ ಪರೀಕ್ಷಾ ತಯಾರಿ ನಡೆಸಿದರೆ ಸಾಮಾನ್ಯವಾಗಿ ದಿನಕ್ಕೆ ನಾಲ್ಕು ಗಂಟೆ ತಯಾರಿ ಸಾಕಾಗುತ್ತದೆ. ದಿನ ಕಳೆದಂತೆ ತಯಾರಿ ಆರಂಭಿಸಿದರೆ ಕಲಿಕೆಯ ವೇಗ ಹೆಚ್ಚಾಗಿ ವಿಷಯಗಳನ್ನು ಸರಿಯಾಗಿ ಮನನ ಮಾಡದೆ ಎಡವುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಸಾಕಷ್ಟು ಮೊದಲೇ ತಯಾರಿ ಅಗತ್ಯ ಎಂದರು. ಅಧ್ಯಯನ ಮಾಡುವಾಗ ಸರಿಯಾಗಿ ಅರ್ಥೈಸಿಕೊಂಡು ಮಾಡಬೇಕಾದುದು ಬಹು ಮುಖ್ಯ ಅಂಶ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡುತ್ತಾ ಪ್ರಶ್ನೆ ಪತ್ರಿಕೆ – ಅದರ ಅಧ್ಯಯನ-ಉತ್ತರಿಸಬೇಕಾದ ವಿಧಾನ-ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ರೀತಿ- ಜಾಸ್ತಿ ಅಂಕಗಳಿಸುವ ಹಾದಿಯ ಬಗ್ಗೆ ಉದಾಹರಣೆಗಳ ಸಹಿತ ವಿಸ್ತೃತವಾಗಿ ಮನೋಜ್ಞವಾಗಿ ವಿವರಿಸಿದರು.

RELATED ARTICLES  ದೇವರ ನಾಡು ಕೇರಳದಲ್ಲಿ ಮತ್ತೆ ಪ್ರವಾಹ ಭೀತಿ: 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್!

‌ಕಾರ್ಯಕ್ರಮದಲ್ಲಿ ಮುಳ್ಳೇರಿಯಾ ಮಂಡಲದ ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ರೀ ಎಡಕ್ಕಾನ ಕೇಶವ ಪ್ರಸಾದ,ಈಶ್ವರಮಂಗಲ ಹವ್ಯಕ ವಲಯ ಪ್ರಧಾನ ಶ್ರೀ ಕೃಷ್ಣಮೂರ್ತಿ ಮಾಡಾವು,ಕಾರ್ಯದರ್ಶಿ ಶ್ರೀ ಗೋವಿಂದರಾಜ್ ದೇಲಂಪಾಡಿ, ಶಿಷ್ಯಮಾಧ್ಯಮ ಪ್ರಧಾನ ಯಲ್.ಬಿ.ಪೆರ್ನಾಜೆ ಭಾಗವಹಿಸಿದ್ದರು. 15 ಮಂದಿ ಹುಡುಗರು ಮತ್ತು 10 ಮಂದಿ ಹುಡುಗಿಯರು ಕಾರ್ಯಕ್ರಮದ ಪ್ರಯೋಜನ ಪಡೆದರು. ಮಕ್ಕಳ ಆಸಕ್ತಿಯಿಂದ‌ಕಾರ್ಯಕ್ರಮ ನಿಗದಿತ ಅವಧಿ ಮೀರಿ ಮತ್ತೂ ಒಂದೂವರೆ ತಾಸು ಮುಂದುವರಿದುದು ಕಾರ್ಯಕ್ರಮದ ಯಶಸ್ಸಿನ ಸಂಕೇತವೊದಗಿಸಿತು. ‌ ಆರಂಭದಲ್ಲಿ ಶಾಲಾ ಪ್ರಾಧ್ಯಾಪಕರಾದ ಶ್ರೀ ಕುಮಾರ ನರಸಿಂಹರವರು ಕಾರ್ಯಕ್ರಮವನ್ನು ನಿರೂಪಿಸಿದರು.ಈ ಸದವಕಾಶವನ್ನು ಒದಗಿಸಿಕೊಟ್ಟುದಕ್ಕೆ ವಿದ್ಯಾರ್ಥಿ ನಾಯಕ‌ ಶಾನಿದ್ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳನ್ನರ್ಪಿಸಿದರು. ವಲಯದ ಪರವಾದ ವಿನಂತಿಯನ್ನು ಮನ್ನಿಸಿ ಈ ಕಾರ್ಯಾಗಾರವನ್ನು ನಡೆಸಿಕೊಟ್ಟುದಕ್ಕೆ ವಲಯಾಧ್ಯಕ್ಷ ಶ್ರೀ ಕೃಷ್ಣಮೂರ್ತಿ ಮಾಡಾವು ಇವರು ಶ್ರೀ ವಿಶ್ವೇಶ್ವರ ಭಟ್ಟರನ್ನು ವಲಯದ ಪರವಾಗಿ ಗೌರವಿಸಿದರು. ಪ್ರಾಂಶುಪಾಲ ಶ್ರೀ ಕೆ.ಶಾಮಣ್ಣರವರು ಇಂದಿನ ಕಾರ್ಯಾಗಾರದ ಉತ್ತಮ ಪ್ರಯೋಜನ ಪಡೆದು ಉನ್ನತ ವಿದ್ಯಾವಂತರಾಗಲು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

RELATED ARTICLES  ಉತ್ತರಕನ್ನಡದಲ್ಲಿ ಇಂದು 43 ಜನರಲ್ಲಿ ಕೊರೋನಾ ಪಾಸಿಟೀವ್

ಕಾರ್ಯಕ್ರಮದ ಕೊನೆಯಲ್ಲಿ ತರಗತಿ ನಡೆಸಿದ ಶ್ರೀಯುತ ವಿಶ್ವೇಶ್ವರ ಭಟ್ಟರಿಗೆ ಮತ್ತು ಸ್ಥಳಾವಕಾಶವಿತ್ತು ಸಹಕರಿಸಿದ ಶಾಲಾ ಆಢಳಿತ ವರ್ಗಕ್ಕೆ ,ಪ್ರಾಂಶುಪಾಲ ಶ್ರೀ ಕೆ.ಶಾಮಣ್ಣರಾದಿಯಾಗಿ ಎಲ್ಲಾ ಶಿಕ್ಷಕ ವರ್ಗಕ್ಕೆ ವಲಯ ವತಿಯಿಂದ ಈಶ್ವರಮಂಗಲ ವಲಯದ ಶಿಷ್ಯಮಾಧ್ಯಮ ವಿಭಾಗದ ಪ್ರಧಾನ ಯಲ್.ಬಿ.ಪೆರ್ನಾಜೆ ಧನ್ಯವಾದಗಳನ್ನು ಅರ್ಪಿಸುವುದರೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
‌‌ ‌ವರದಿ :- ಯಲ್.ಬಿ.ಪೆರ್ನಾಜೆ. ಶಿಷ್ಯಮಾಧ್ಯಮ ವಿಭಾಗ