ಶಿರಸಿ: ಕಗ್ಗ ಕಿರುಚಿತ್ರ ಬಿಡುಗಡೆ ಸಮಾರಂಭ ಮತ್ತು ಚಿತ್ರ ವಿಮರ್ಶೆ ಕಾರ್ಯಕ್ರಮವು ಜ.20ರ ಸಂಜೆ 6.30 ಘಂಟೆಗೆ ಲಯನ್ಸ್ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ, ಜೆ.ಡಿ.ಎಸ್ ಮುಖಂಡ ಶಶುಭೂಷಣ ಹೆಗಡೆ, ಆಗಮಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನಗೋಡು ಗ್ರಾಮ ಪಂಚಾಯತ ಅಧ್ಯಕ್ಷರಾದ ಜಲಜಾಕ್ಷಿ ಎಲ್. ಹೆಗಡೆ ಆಲ್ಮನೆ, ವಹಿಸಲಿದ್ದಾರೆ. ಹಾಗೂ ಗೌರವಾನ್ವಿತ ಅತಿಥಿಗಳಾಗಿ ಯುವ ಉದ್ಯಮಿ ಜೆ.ಡಿ.ಎಸ್. ಮುಖಂಡ ಕೀರ್ತಿ ಹೆಗಡೆ, ಆಗಮಿಸಲಿದ್ದಾರೆ. ರೋಯಲ್ ಎನ್‍ಪಿಲ್ಡ ಶೋರೂಂನ ಮ್ಯಾನೇಜರ್ ಶಿರಸಿ ಚಂದ್ರಶೇಖರ ಹೆಚ್.ಆಗಮಿಸುವರು.

RELATED ARTICLES  ಮಗುವಿನೊಂದಿಗೆ ತೆರಳಿದ್ದ ಮಹಿಳೆ ನಾಪತ್ತೆ : ಪ್ರಕರಣ ದಾಖಲು.

ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಶಿರಸಿ ರತ್ನಾಕರ, ಮಜೀಮ್ ಸಾಹೇಬ ಗುಡ್ನಾಪುರ, ಡಾ. ಮಹೇಶ ಹೆಗಡೆ, ಶಿರಸಿ, ಎಸ್.ಎಸ್. ಭಟ್ಟ, ಕೆ.ಎನ್.ರೆಡ್ಡಿ, ಜೆ.ಪಿ ನಾಯ್ಕ, ಪ್ರೊ. ಗಣೇಶ ಹೆಗಡೆ, ಎಂ.ಪಿ ಭಟ್ಟ, ಹಾಗೂ ಗಣಪತಿ ನಾಯ್ಕ ಆಗಮಿಸಲಿದ್ದಾರೆ.

RELATED ARTICLES  ಯುವತಿಯ ಫೋಟೊವನ್ನು ಬೆತ್ತಲೆ ಫೋಟೋ ಜೊತೆ ಎಡಿಟ್..! ದೂರು ದಾಖಲು.

ತಾರಾಗಣ: ಮಂಜುನಾಥ ನಾಯ್ಕ, ಆಶಿಕಾ ಹೆಗಡೆ, ಪ್ರಜ್ಞಾ ಹೆಗಡೆ, ಪುನೀತ ಹೆಗಡೆ, ಹಿತೇಶ ಭಟ್ಟ, ಗಜಾನನ ಹೆಗಡೆ, ಛಾಯಾಚಿತ್ರಗ್ರಹಣ ಮತ್ತು ಸಂಕಲನ: ಅಶ್ವಿನ್ ಹೆಗಡೆ ಕಥೆ ಚಿತ್ರಕಥೆ, ನಿರ್ದೇಶನ : ಗಣೇಶ ಹೆಗಡೆ

(ಟಿಕೇಟ್‍ಗಳು ದೊರೆಯುವ ಸ್ಥಳ: ಪೂಜಾ ಮೆಡಿಕಲ್ಸ (ನಟರಾಜ ರೋಡ್ ಶಿರಸಿ)
ಅಥವಾ ನಾಯಕ ಗೋಬಿ ಕಾರ್ನ್‍ರ್ ದೇವಿಕರೆ ಶಿರಸಿ