ನವದೆಹಲಿ: ಡೋಕ್ಲಾಮ್ ಬಗ್ಗೆ ಮಾತನಾಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಡೊಕ್ಲಾಮ್ ವಿವಾದದ ನಂತರದಲ್ಲಿ ಯಾವುದೇ ಗಂಭೀರ ಸಮಸ್ಯೆ ಉದ್ಭವಿಸಿಲ್ಲ ಎಂದು ಹೇಳಿದ್ದಾರೆ.

ಚೀನಾ-ಭಾರತ ನಿರಂತರ ಮಾತುಕತೆ ನಡೆಸಿದ್ದು, ವಿವಾದ ಉಂಟಾಗುವುದಕ್ಕೂ ಮುನ್ನ ಇದ್ದ ಶಾಂತಿಯುತ ವಾತಾವರಣ ಈಗ ಪುನಃ ನಿರ್ಮಾಣವಾಗಿದೆ. ಆದರೆ ಸೇನೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 22-11-2018 ರ ರಾಶಿ ಭವಿಷ್ಯ ಇಲ್ಲಿದೆ.

ಇನ್ನು ಇದೇ ವೇಳೆ ಉತ್ತರ ಡೊಕ್ಲಾಮ್ ನಲ್ಲಿ ವಿವಾದ ಉಂಟಾದಾಗ ಇದ್ದ ಚೀನಾ ಸೈನಿಕರ ಸಂಖ್ಯೆಗಿಂತ ಈಗಿರುವ ಸಂಖ್ಯೆ ಕಡಿಮೆ ಆಗಿದೆ ಎಂದು ರಾವತ್ ಹೇಳಿದ್ದು, ಚೀನಾದವರು ತಾತ್ಕಾಲಿಕವಾದಂತಹ ಮೂಲಸೌಕರ್ಯ ಅಭಿವೃದ್ಧಿ ಮಾಡಿಕೊಂಡಿದ್ದು ಮತ್ತೊಮ್ಮೆ ಬರಬಹುದು ಎಂದು ಊಹೆ ಮಾಡಬಹುದು, ಅಥವಾ ಚಳಿಗಾಲದಲ್ಲಿ ಅವರ ಉಪಕರಣಗಳನ್ನು ತೆಗೆದುಕೊಂಡು ಹೋಗಲಾರದೇ ಆ ವ್ಯವಸ್ಥೆ ಮಾಡಿರಬೇಕು ಎಂದು ರಾವತ್ ಹೇಳಿದ್ದಾರೆ.

RELATED ARTICLES  ಬದುಕಿನ ಯಾನ ಮುಗಿಸಿದ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ