ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯ ಚಿಂತನೆಯನ್ನು ಬೆಂಬಲಿಸುವುದಿಲ್ಲವಾದ ಕಾರಣ ಪತಂಜಲಿ ಸಂಸ್ಥೆಯೂ ಸಹ ಜಾಗತಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಮುಂದಾಗುವುದಿಲ್ಲ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಆರ್ಥಿಕ ಸಹಕಾರಕ್ಕಾಗಿ ಯಾವುದೇ ಸಂಸ್ಥೆಗಳು ಕೇಳಿದರೆ ಅದನ್ನು ಸ್ವಾಗತಿಸುವುದಾಗಿ ರಾಮ್ ದೇವ್ ಹೇಳಿದ್ದಾರೆ. ನಾವು ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಮುಂದಾಗುವುದಿಲ್ಲ, ಆರ್ಥಿಕ ಸಹಕಾರ ನೀಡುವ ಆಹ್ವಾನ ಬಂದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಪತಂಜಲಿಯ ಇ-ಕಾಮರ್ಸ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿರುವ ಯೋಗ ಗುರು ರಾಮ್ ದೇವ್ ಹೇಳಿದ್ದಾರೆ.

RELATED ARTICLES  ಐಸಿಎಸ್‍ಸಿ 10ನೇ ತರಗತಿ ಫಲಿತಾಂಶ: ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ಸ್ ಗೂಡ್ಸ್ ವಿಭಾದಲ್ಲಿ ಸ್ವದೇಶಿ ಉತ್ಪನ್ನಗಳ ಮಾರಾಟದ ಉದ್ದೇಶಕ್ಕಾಗಿ ಇ-ಕಾಮರ್ಸ್ ವೆಬ್ ಸೈಟ್ ಗಳೊಂದಿಗೆ ಪತಂಜಲಿ ಒಪ್ಪಂದ ಮಾಡಿಕೊಂಡಿದೆ. ಈಗ ಪತಂಜಲಿ ಉತ್ಪನ್ನಗಳು ಪೇಟಿಎಂ ಮಾಲ್, ಬಿಗ್ ಬ್ಯಾಸ್ಕೆಟ್, ಫ್ಲಿಪ್ ಕಾರ್ಟ್, ಅಮೇಜಾನ್ ಸೇರಿದಂತೆ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿಯೂ ಲಭ್ಯವಿದೆ.

RELATED ARTICLES  ಶಾಂತಿಕೆಯ ಆವಾರದಲ್ಲಿ ಭಕ್ತಿ ಗಾನ ಲಹರಿ ಪ್ರಸ್ತುತಿ