ವಾಷಿಂಗ್ ಟನ್: ಪ್ರತಿಯೊಬ್ಬರಿಗೂ ಸಾಮಾಜಿಕ ಜೀವನದಿಂದ ತುಸು ವಿರಾಮ ಬೇಕಾಗುತ್ತದೆ, ಆದರೆ ಕೆಲವೊಮ್ಮೆ ಇದೇ ಒಂಟಿತನ ಅಥವಾ ಜನರಿಂದ ದೂರವಿರುವಿಕೆಯು ನಿಮ್ಮ ಸೃಜನಶೀಲತೆ ಹೆಚ್ಚುವಂತೆ ಮಾಡುತ್ತದೆ, ಒಂಟಿತನವು ವ್ಯಕ್ತಿಯ ಸೃಜನಶೀಲತೆಯನ್ನು ಸುಧಾರಿಸುತ್ತದೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ನ್ಯೂ ಯಾರ್ಕ್ ನ ಬಫೆಲೋ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಕೆಲವರು ತಮ್ಮನ್ನು ತಾವು ಒಂಟಿಯಾಗಿಸಿಕೊಂಡು ನಮ್ಮ ಒಳಗಿನ ಆಂತರ್ಯವನ್ನು ಹೊರಹಾಕಲು ಬಯಸುತ್ತಾರೆ. “ತಮ್ಮ ಸಮಸ್ಯೆಗಳು ಮತ್ತು ಅದಕ್ಕಿರಬಹುದಾದ ಪರಿಹಾರಗಳನ್ನು ಅರಿತುಕೊಳ್ಳುವ ಸಲುವಾಗಿ ಯಾರೊಬ್ಬರು ಏಕೆ ಸಮಾಜದಿಂದ ವಿಮುಖರಾಗುತ್ತಾರೆ ಎನ್ನುವುದನ್ನು ನಾವು ಅರ್ಥೈಸಿಕೊಲ್ಲಬೇಕು” ಅಮೆರಿಕದ ಪ್ರಮುಖ ಲೇಖಕರಾದ ಜೂಲಿ ಬೌಕರ್ ಹೇಳಿದ್ದಾರೆ.

RELATED ARTICLES  ಮಿಲನಕ್ಕೆ ಜಾಗ ಹುಡುಕುತ್ತಾ ಮನೆಯಂಗಳಕ್ಕೆ ಬಂದ ಉರಗಗಳು. : ಉರಗ ತಜ್ಞ ಪವನ್ ನಾಯ್ಕರಿಂದ ರಕ್ಷಣೆ : ಆ ಕ್ಷಣದ ವಿಡಿಯೋ ಇಲ್ಲಿದೆ ನೋಡಿ.

ಕೆಲವರು ಒಂಟಿಯಾಗಿ ಪುಸ್ತಕ ಓದುವದಕ್ಕೆ, ಕಂಪ್ಯೂಟರ್ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಾರೆ. ಹಿಂದಿನ ಎಲ್ಲಾ ಅಧ್ಯಯನದ ಪ್ರಕಾರ ವ್ಯಕ್ತಿ ಒಂಟಿಯಾಗಿದ್ದರೆ ಖಿನ್ನತೆಯಂತಹಾ ಮಾನಸಿಕ ತೊಂದರೆ ಉಂಟಾಗುತ್ತದೆ ಎಂದು ತಿಳಿಯಲಾಗಿತ್ತು. ಆದರೆ ಈ ನೂತನ ವರದಿಯು ಒಂಟಿತನ ಅಥವಾ ಸಮಾಜದಿಂದ ದೂರವಾಗುವುದು ವ್ಯಕ್ತಿಯ ಉನ್ನತಿಗೂ ಸಹಾಯವಾಗುತ್ತದೆ ಎಂದು ಹೇಳಿದೆ.

RELATED ARTICLES  ಉ.ಕ ದ ಪ್ರಮುಖ ಸುದ್ದಿಗಳು - ಎರಡು ಕಾರಿನ ನಡುವೆ ಅಪಘಾತ : ಬೈಕ್ ನಿಂದ ಬಿದ್ದ ವ್ಯಕ್ತಿ ಸಾವು.

ಯುವಕರು ಹೆಚ್ಚಾಗಿ ಒಂಟಿಯಾಗಿರಲು ಬಯಸುತ್ತಾರೆ ಅಷ್ಟಕ್ಕೆ ಅವರಾರೂ ಸಮಾಜದ್ರೋಹಿಗಳಲ್ಲಿ.ಸಂಶೋಧಕರು ಹೇಳಿದ್ದಾರೆ. ಒಂದೊಮ್ಮೆ ಯಾರಾರ್ದರೂ ಒಂಟಿಯಾಗಿದ್ದಾಗ ಅವರಿ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ಅವರ ಜೀವನದ ಯಾವುದೇ ಸಮಸ್ಯೆಗೆ ಅಂತಹಾ ಸಮಯದಲ್ಲಿ ಪರಿಹಾರ ದೊರೆಯಬಹುದು.
ಇದಲ್ಲದೆ ಸಂಕೋಚ, ಆತಂಕಗಳು ಸಹ ದೂರವಾಗುವ ಸಾದ್ಯತೆಗಳು ಇದೆ ಎಂದು ಸಂಶೋಧನಾ ವರದಿ ಪ್ರಸ್ತಾಪಿಸಿದೆ.ವ್ಯಕ್ತಿತ್ವ ಹಾಗೂ ವೈಯುಕ್ತಿಕ ವ್ಯತ್ಯಾಸಗಳ ಕುರಿತ ನಿಯತಕಾಲಿಕದಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.