ಕಾರವಾರ: ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ನೋಂದಣಿ ಸೇರಿದಂತೆ ವಿವಿಧ ಚುನಾವಣೆ ವಿಷಯಗಳ ಕುರಿತು ಮಾತನಾಡಲು ಜನವರಿ 19ರಂದು ಬೆಳಿಗ್ಗೆ 9.05ರಿಂದ 10ಗಂಟೆವರೆಗೆ ನಡೆಯುವ ಆಕಾಶವಾಣಿ ಫೋನ್‍ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮತದಾರರ ವ್ಯವಸ್ಥಿತ ಪಾಲ್ಗೊಳ್ಳುವಿಕೆ ಹಾಗೂ ಮತದಾರರ ಶೈಕ್ಷಣಿಕ ಕಾರ್ಯಕ್ರಮ `ಸ್ವೀಪ್’ ಜಿಲ್ಲಾ ಸಮಿತಿ ಅಧ್ಯಕ್ಷರಾದ ಎಲ್.ಚಂದ್ರಶೇಖರ ನಾಯಕ ಭಾಗವಹಿಸಲಿದ್ದಾರೆ.

RELATED ARTICLES  ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣ

ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾಗಿ ಮತದಾರರ ನೋಂದಣಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಅಥವಾ ಮತದಾರರ ಚೀಟಿ ಇದ್ದೂ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಅಥವಾ ಇಲ್ಲವೆ ಅಥವಾ ಮತದಾರರ ಪಟ್ಟಿ ವಿಷಯವಾಗಿ ಇನ್ನಾವುದೇ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಫೋನ್ ಮಾಡಿದಲ್ಲಿ ತಮ್ಮ ಸಮಸ್ಯೆಗೆ ಅವರು ಉತ್ತರಿಸಲಿದ್ದಾರೆ.

RELATED ARTICLES  ಆರ್ಥಿಕ ಸಂಕಷ್ಟದಲ್ಲಿರುವ ಇಂಜಿನಿಯರಿಂಗ್/ಮೆಡಿಕಲ್ ಸೇರಬಯಸುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿಗಾಗಿ ಅರ್ಜಿ ಆಹ್ವಾನ

ಜನವರಿ 19ರಂದು ಬೆಳಿಗ್ಗೆ 9.05ರಿಂದ 10ಗಂಟೆವರೆಗೆ ಕಾರವಾರ ಆಕಾಶವಾಣಿ ದೂರವಾಣಿ 08382-225592 ಅಥವಾ 08382-221902 ನಂಬರಿಗೆ ಕರೆ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.