ಕುಮಟಾ: ದಿನಾಂಕ 01-02-2018 ರಿಂದ 05-02-2018 ರ ವರೆಗೆ ನಡೆಯುವ 6 ನೇ ವರ್ಷದ “ಕುಮಟಾ ಉತ್ಸವ”ದ ಮಾಹಿತಿ ನೀಡಲು, ‘ವೈಭವ ಪ್ಯಾಲೇಸ್’ ನಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ರವಿಕುಮಾರ್ ಮೋಹನ್ ಶೆಟ್ಟಿಯವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

RELATED ARTICLES  ಕುಮಟಾದ ಕುಂಭೇಶ್ವರ ದೇವಾಲಯದ ಅರ್ಚಕ ವಿಶ್ವೇಶ್ವರ ಭಟ್ಟರ ಸುಳಿವಿಲ್ಲ: ಪೋಲೀಸರಿಂದ ‌ನಡೆಯುತ್ತಲಿದೆ ಹುಡುಕುವ ಕಾರ್ಯ!

ಈ ಬಾರಿಯ ಕುಮಟಾ ಉತ್ಸವವನ್ನು ಬಾರಿ ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಕುಮಾರಿ ಆಧ್ಯ ಮತ್ತು ಚಂದನ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ರವಿಕುಮಾರ ಶೆಟ್ಟಿ ತಿಳಿಸಿದರು.

RELATED ARTICLES  ಭಾನ್ಕುಳಿಮಠದಲ್ಲಿ ಪ್ರತಿಷ್ಠಾಪನಾ ಮಹೋತ್ಸವ

ಈ ಬಾರಿಯ ಪ್ರಮುಖ ಆಕರ್ಷಣೆ ನಗೆ ಹಬ್ಬ ಮತ್ತು ಡ್ಯಾನ್ಸ್ ಧಮಾಕಾದ ಬಗ್ಗೆ ಮಾಹಿತಿ ನೀಡಿದ ಇವರು ಕಾರ್ಯಕ್ರಮಕ್ಕೆ‌ಆಗಮಿಸಿ ಕಾರ್ಯಕ್ರಮ‌ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಯೋಗೀಶ ಕಾಮತ್,ಗಣಪತಿ ಶೆಟ್ಟಿ, ಕೃಷ್ಣಾನಂದ ವರ್ಣೇಕರ ಇನ್ನಿತರರು ಹಾಜರಿದ್ದರು.